ಸ್ನೇಹಿತನ ಪತ್ನಿ ಮೇಲೆ ರೇಪ್ ಪ್ರಕರಣ : ಆ.17ಕ್ಕೆ ಹಾಲಪ್ಪ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Haratala-Halappa--01

ಶಿವಮೊಗ್ಗ, ಆ.8-ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳ ಹಾಲಪ್ಪ ಅವರ ಮೇಲಿನ ಆರೋಪದ ಅಂತಿಮ ತೀರ್ಪು ಆಗಸ್ಟ್ 17ಕ್ಕೆ ನಿಗದಿಯಾಗಿದೆ. ಶಿವಮೊಗ್ಗದ 2ನೆ ಸತ್ರ ನ್ಯಾಯಾಲಯ ತೀರ್ಪನ್ನು ಆ.17ಕ್ಕೆ ನಿಗದಿಗೊಳಿಸಿತು. ತನ್ನ ಸ್ನೇಹಿತ ವೆಂಕಟೇಶ್ ಅವರ ಪತ್ನಿ ಚಂದ್ರಮತಿ ಎಂಬುವರ ಮೇಲೆ ನಡೆಸಿದರೆನ್ನಲಾದ ಅತ್ಯಾಚಾರ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ಇದರ ಅಂತಿಮ ತೀರ್ಪು 17ಕ್ಕೆ ಪ್ರಕಟವಾಗಲಿದ್ದು, ಹರತಾಳ ಹಾಲಪ್ಪ ಅವರ ಭವಿಷ್ಯ ಅಂದು ನಿರ್ಧಾರವಾಗಲಿದೆ. ಹಾಲಪ್ಪ ಅವರು ಸಚಿವರಾಗಿದ್ದಾಗ ಈ ಅತ್ಯಾಚಾರ ಆರೋಪ ಕೇಳಿಬಂದಿತ್ತು.

ಸ್ವತಃ ಚಂದ್ರಮತಿಯವರೇ ಅತ್ಯಾಚಾರದ ಆರೋಪ ಮಾಡಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.  ಪ್ರಕರಣವನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದ ಸಿಐಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿರುವ ನ್ಯಾಯಾಲಯ ಆ.17ರಂದು ತೀರ್ಪು ಪ್ರಕಟಿಸಲಿದೆ.

Facebook Comments

Sri Raghav

Admin