ಸ್ಪರ್ಧೆ ಎದುರಿಸಲು ಎಲ್‍ಐಸಿ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

mandya

ಮಂಡ್ಯ, ಸೆ.2- ದೇಶದಲ್ಲಿ ಖಾಸಗಿ ವಿಮಾ ಸಂಸ್ಥೆಗಳು ಪೈಪೋಟಿ  ನೀಡುತ್ತಿದ್ದು, ಎಲ್‍ಐಸಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಖಾಸಗಿಯವರ ಸ್ಪರ್ಧೆ ಎದುರಿಸಲು ಎಲ್‍ಐಸಿ ಸಮರ್ಥವಾಗಿ ಸಜ್ಜುಗೊಳ್ಳಬೇಕಾಗಿದೆ ಎಂದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ವಿ.ರವೀಂದ್ರ ಹೇಳಿದರು.ನಗರದ ಎಲ್‍ಐಸಿ ಕಚೇರಿಯಲ್ಲಿ ನಡೆದ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್‍ಐಸಿಯ 60 ವರ್ಷಗಳ ಸೇವೆ, ಸಾಧನೆ, ದೇಶಾಭಿವೃದ್ಧಿಯಲ್ಲಿ ಅದರ ನೆರವು ಎಲ್ಲವೂ ಶ್ಲಾಘನೀಯವಾಗಿದೆ.

ಕುಗ್ರಾಮದ ಬಡ ರೈತ, ಕೂಲಿ ಕಾರ್ಮಿಕನವರೆಗೂ ತಲುಪಿರುವ ಎಲ್‍ಐಸಿಯ ಸೇವೆ ಅಭಿನಂದನೀಯವಾಗಿದೆ ಎಂದು ಶ್ಲಾಘಸಿದರು.  ಸಿಬ್ಬಂದಿ ವರ್ಗ ಮತ್ತು ಪ್ರತಿನಿಧಿಗಳು ಖಾಸಗಿ ವಿಮಾ ಸಂಸ್ಥೆಗಳ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಕಟಿಬದ್ಧರಾಗಬೇಕು ಎಂದು ಕರೆ ನೀಡಿದರು.ಮುಖ್ಯ ಶಾಖಾಧಿಕಾರಿ ಪಿ.ಎಸ್.ಸೋಮೇಶ್ ಮಾತನಾಡಿ, 2048 ಶಾಖೆಗಳ ಮೂಲಕ ರಾಷ್ಟ್ರವ್ಯಾಪಿಯಾಗಿರುವ ಎಲ್‍ಐಸಿ 1 ಲಕ್ಷಕ್ಕೂ ಮಿಕ್ಕಿ ಸಿಬ್ಬಂದಿ ವರ್ಗ ಮತ್ತು 10 ಲಕ್ಷಕ್ಕೂ ಹೆಚ್ಚು ಮಿಕ್ಕಿ ಪ್ರತಿನಿಧಿಗಳನ್ನು ಹೊಂದಿದೆ ಎಂದು ತಿಳಿಸಿದರು.ಪಾಲಿಸಿದಾರ ಮಹೇಶ್ ಮಾತನಾಡಿ, ನನ್ನಂತ ಹಳ್ಳಿಗಾಡಿನ ರೈತಾಪಿ ಕುಟುಂಬಗಳಿಗೆ ಎಲ್‍ಐಸಿಯಿಂದ ಬಹಳ ಅನುಕೂಲವಾಗಿದೆ. ಈ ಸಂಸ್ಥೆ ಶತಮಾನೋತ್ಸವ ಆಚರಿಸಲು ಎಂದು ಹರಸಿದರು.ಬಿ.ಎಸ್.ಸುಮ, ಅಧಿಕಾರಿ ಶಿವಮಲ್ಲು, ನವರತ್ನಮ್ಮ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin