ಸ್ಪೇನ್‍ನ ರೆಸ್ಟೋರೆಂಟ್‍ ಒಂದರಲ್ಲಿ ಸಿಲಿಂಡರ್ ಸ್ಪೋಟಿಸಿ 80 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Blaast

ಮ್ಯಾಡ್ರಿಡ್, ಅ.3-ಸ್ಪೇನ್‍ನ ವೆಲೆಜ್-ಮಲಗಾದ ರೆಸ್ಟೋರೆಂಟ್‍ನಲ್ಲಿ ನಿನ್ನೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸ್ಪೇನ್‍ನ ದಕ್ಷಿಣ ಕರಾವಳಿಯ ಜನಪ್ರಿಯ ಪ್ರವಾಸಿ ತಾಣವಾದ ಮಲಗಾದಿಂದ 40 ಕಿ.ಮೀ.ದೂರದಲ್ಲಿರುವ ವೆಲೆಜ್ ಪಟ್ಟಣದಲ್ಲಿ ಸ್ಥಳೀಯ ಉತ್ಸವದ ವೇಳೆ ಲಾ ಬೊಹೆಮಿಯಾ ರೆಸ್ಟೋರೆಂಟ್‍ನಲ್ಲಿ ಅನಿಲ ಸಿಲಿಂಡರ್ ಸ್ಫೋಟಗೊಂಡಿತು. ಈ ದುರ್ಘಟನೆಯಲ್ಲಿ 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin