ಸ್ಪೇನ್ ಜತೆ ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ : ನರೇಂದ್ರ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

modi
ಮ್ಯಾಡ್ರಿಡ್,ಮೇ 31-ಭದ್ರತಾ ಸವಾಲುಗಳನ್ನು ಎದುರಿಸುವ ಭಾರತ ಮತ್ತು ಸ್ಪೇನ್ ಭಯೋತ್ಪಾದನೆ ನಿಗ್ರಹ ಹೋರಾಟಕ್ಕೆ ದ್ವಿಪಕ್ಷೀಯ ಸಹಕಾರವನ್ನು ಬಲಗೊಳಿಸುವ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  ಆರು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಂಡಿರುವ ಮೋದಿ, ತಮ್ಮ ಎರಡನೆ ಹಂತವಾಗಿ ಸ್ಪೇನ್ ರಾಜಧಾನಿ ಮ್ಯಾಡ್ರಿಡ್‍ನಲ್ಲಿರುವ ಮ್ಯಾಂಕ್‍ಲಾವ ಅರಮನೆಯಲ್ಲಿ ರಾಷ್ಟ್ರಾಧ್ಯಕ್ಷ ಮಾರಿಯಾನೋ ರಜೇಯ್ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ದ್ವಿಪಕ್ಷೀಯ ಸಮಾಲೋಚನೆ ನಡೆಸಿದರು.  ಉಭಯ ದೇಶಗಳಿಗೆ ಭಯೋತ್ಪಾದಕರಿಂದ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಪಿಡುಗನ್ನು ಮಟ್ಟ ಹಾಕಲು ದ್ವಿಪಕ್ಷೀಯ ಸಹಕಾರವನ್ನು ಸದೃಢಗೊಳಿಸುವ ಅಗತ್ಯವನ್ನು ಈ ಸಂದರ್ಭದಲ್ಲಿ ಮೋದಿ ಸ್ಪೇನ್ ಮುಖಂಡರ ಗಮನಕ್ಕೆ ತಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin