ಸ್ಮಾರ್ಟ್’ಫೋನ್ ಹೆಚ್ಚು ಬಳಸುವುದರಿಂದ ಕಣ್ಣು ಕಳ್ಕೋತೀರಾ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

Smart-Phone

ಮಾನವನ ಕಣ್ಣಿನ ಸ್ವಾಭಾವಿಕ ನೋಡುವ ವಿಧಾನವೆಂದರೆ, ಯಾವುದಾದರೂ ವಸ್ತುವಿನ ಮೇಲೆ ಬೆಳಕಿನ ಕಿರಣಗಳು ಬಿದ್ದಾಗ ಅವುಗಳನ್ನು ಆ ವಸ್ತುವು ಹೀರುವುದರಿಂದ ಹಾಗೂ ಅದರ ಪ್ರತಿಫಲನದಿಂದ ಉಂಟಾಗುವ ಕಿರಣಗಳು ನಮ್ಮ ಕಣ್ಣಿನ ಮೇಲೆ ಬೀಳುವುದರಿಂದ. ಈ ಪ್ರಕ್ರಿಯೆಯಲ್ಲಿ ನಮ್ಮ ಅಕ್ಷಿಪಟಲದ ಮೇಲೆ ಬೀಳುವ ಬೆಳಕಿನ ಶಕ್ತಿಯು ಅಲ್ಪ ಪ್ರಮಾಣದ್ದಾಗಿರುತ್ತದೆ. ಆದರೆ ವಿದ್ಯುನ್ಮಾನ ಪರದೆಗಳನ್ನು ವೀಕ್ಷಿಸುವಾಗ ಈ ಕಿರಣಗಳು ನೇರವಾಗಿ ಅಕ್ಷಿಪಟಲದ ಮೇಲೆ ಬೀಳುವುದರಿಂದ ಹೆಚ್ಚು ಪ್ರಮಾಣದ ಶಕ್ತಿಪಾತ ಕಣ್ಣಿನ ಮೇಲಾಗುತ್ತದೆ. ಫೋನಿನಲ್ಲಿ ಚಲನಚಿತ್ರ ವೀಕ್ಷಣೆ ಕಣ್ಣು ಹಾಗೂ ಕಿವಿ ಎರಡಕ್ಕೂ ಹಾನಿಕಾರಕ. ಹಾಗಾಗಿ ಚಾಳೀಸು ಬರಲು ಇನ್ನು 40 ವರ್ಷ ಕಾಯಬೇಕಿಲ್ಲ!

ಎಡೆಬಿಡದೆ ನಿರಂತರವಾಗಿ ಪರದೆ ಸ್ಮಾಟ್‍ಫೋನ್ ಅಥವಾ ಕಂಪ್ಯೂಟರ್ ನೋಡುವುದರಿಂದ ಕಣ್ರೆಪ್ಪೆಯನ್ನು ಬಡಿಯುವ ಗತಿ ನಿಧಾನವಾಗುತ್ತದೆ. ಇದರಿಂದ ಕಣ್ಣಿನ ಹೊರಭಾಗದ ದ್ರವ ಆರಿಹೋಗಿ ಅನೇಕ ಕಣ್ಣಿನ ತೊಂದರೆಗಳು ಕಾಣಿಸುತ್ತವೆ.

ನಿದ್ದೆಗೆಡಿಸುವ ‘ಸ್ಮಾರ್ಟ್’ ಫೋನ್

ತಾರುಣ್ಯದಲ್ಲಿ ಮನುಷ್ಯನಿಗೆ 8 ರಿಂದ 9 ಗಂಟೆ ನಿದ್ರೆಯ ಅಗತ್ಯ ಇದೆ. ಫೇಸ್‍ಬುಕ್ ನಂತಹ ಸಾಮಾಜಿಕ ಜಾಲತಾಣಗಳ ಅತಿಯಾದ ವ್ಯಾಮೋಹ, ಮಲಗುವಾಗಲೂ ಕಿವಿಗೆ ಹಾಕಿಕೊಂಡು ಹಾಡುಗಳನ್ನು ಕೇಳುವ ಚಟ, ಇವುಗಳಿಂದಾಗಿ ನಿದ್ರೆಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಮನುಷ್ಯನ ಸ್ಮರಣ ಸಾಮಥ್ರ್ಯವನ್ನು ಕುಂಠಿತಗೊಳಿಸುವುದಲ್ಲದೆ ನಿದ್ರಾಹೀನತೆ, ಖಿನ್ನತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

  • ಸ್ಮಾಟ್‍ಫೋನ್‍ಗಳು ಮನೋ ಸಂವೇದನೆಯನ್ನೇ ಹಾಳುಗೆಡವುತ್ತದೆ. ಇದರಿಂದ ಖಿನ್ನತೆ, ನಿದ್ರಾಹೀನತೆಗೆ ಕಾರಣವಾಗುತ್ತದೆ.
  • ಒಂದು ಸಮೀಕ್ಷೆಯ ಐಫೋನ, ಬ್ಲಾಕ್ ಬೆರಿಗಳಂಥ ಸ್ಮಾರ್ಟ್ ಫೋನ್‍ಗಳ ಬಳಕೆಯಿಂದ ಸೆಕ್ಸ ಲೈಫ್‍ಗೂ ಹೊಡೆತಕೊಡುತ್ತದೆ ಎನ್ನುವು ಈಗಾಗಲೇ ಸಾಬೀತಾಗಿದೆ.
  • ಸ್ಮಾರ್ಟ್ಫೋ ನ್‍ಗಳಲ್ಲಿ ವಾಟ್ಸ್‍ಪ್ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆ ಭಾರತದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದ್ದು ಇದರಿಂದ ದಾಂಪತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವೊಂದನ್ನು ಸಮೀಕ್ಷೆ ಬಹಿರಂಗಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin