ಸ್ಮಾರ್ಟ್ ಆಕ್ಟರ್ ಇಮ್ರಾನ್ ಹಶ್ಮಿ ಈಗ ಕ್ಯಾಪ್ಟನ್ ನವಾಬ್

ಈ ಸುದ್ದಿಯನ್ನು ಶೇರ್ ಮಾಡಿ

Nawab

ಬಾಲಿವುಡ್ ಸ್ಮಾರ್ಟ್ ಆಕ್ಟರ್ ಇಮ್ರಾನ್ ಹಶ್ಮಿ ಈಗ ಕ್ಯಾಪ್ಟನ್ ನವಾಬ್. ಈ ಸಿನಿಮಾದ ಮೂಲಕ ಎಮ್ರಾನ್ ನಿರ್ಮಾಪಕನಾಗಿಯೂ ಪ್ರೊಮೋಷನ್ ಪಡೆದಿದ್ದಾನೆ. ಈ ಚಿತ್ರದ ಪ್ರಥಮ ಪೋಸ್ಟರ್ ಬಿಡುಗಡೆಯಾಗಿದ್ದು, ಗಮನಸೆಳೆಯುತ್ತಿದೆ. ಇದಕ್ಕೆ ಕಾರಣವೂ ಇದೆ. ಭಾರತ ಮತ್ತು ಪಾಕಿಸ್ತಾನ ಸಂಬಂಧ ಈಗ ಮತ್ತಷ್ಟು ಹಳಸಿ ಪರಸ್ಪರ ವಾಕ್ಸಮರ ನಡೆಯುತ್ತಿರುವ ಸಂದರ್ಭದಲ್ಲೇ ಈ ಪೋಸ್ಟರ್ ಬಿಡುಗಡೆಗೊಂಡಿದೆ.  ‘ಕ್ಯಾಪ್ಟರ್ ನವಾಬ್’ ಎಂಬ ಚಿತ್ರದ ಟೈಟಲ್ ಕೆಳಗೆ ಟು ಕಂಟ್ರೀಸ್, ಒನ್ ಸೋಲ್ಜರ್ ಎಂದ ಟ್ಯಾಗ್‌ಲೈನ್ (ಅಡಿಬರಹ) ಇದೆ. ಅಲ್ಲದೇ ಈ ಪೋಸ್ಟರ್‌ನಲ್ಲಿ ಎಮ್ರಾನ್ ಮಿಲಿಟರಿ ಪೋಷಾಕಿನಲ್ಲಿ ಎರಡೂ ಕೈಗಳಲ್ಲೂ ಪಿಸ್ತೂಲ್ ಹಿಡಿದಿದ್ದಾನೆ.

ಇವನು ಧರಿಸಿರುವ ಪೋಷಾಕಿನಲ್ಲಿ ಅರ್ಧ ಭಾರತ ಇನ್ನರ್ಧ ಪಾಕಿಸ್ತಾನದ ಮಿಲಿಟರಿ ಸಮವಸ್ತ್ರವಿದೆ. ಹಿನ್ನೆಲೆಯಲ್ಲಿ ಎರಡೂ ದೇಶಗಳ ಧ್ವಜಗಳೂ ಇವೆ. ಮೇಲ್ಮೋಟಕ್ಕೆ ಇದು ಸೌಹಾರ್ದತೆ ಸಾರುವ ಸಿನಿಮಾ ಎನಿಸಿದರೂ, ವಿವಾದದ ಕಿಚ್ಚನ್ನೂ ಹೊತ್ತಿಸುವ ಸಾಧ್ಯತೆಯೂ ಇದೆ. ಆರ್ಮಿ ಮ್ಯಾನ್ ಆಗಿ ಈ ನಟ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾನೆ. ಈ ಚಿತ್ರದ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಸಿನಿಮಾ ನೋಡಬೇಕಾದರೆ ಅಭಿಮಾನಿಗಳು ಮುಂದಿನ ವರ್ಷದ ತನಕ ಕಾಯ ಬೇಕು. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕಾಗಿ ಎಮ್ರಾನ್ ಪೂರ್ಣ ಪ್ರಮಾಣದಲ್ಲಿ ಸಿದ್ಧನಾಗುತ್ತಾನೆ. ಸಿನಿಮಾ ಕಾದು ನೋಡುವ ಸರದಿ ನಮ್ಮದು.

► Follow us on –  Facebook / Twitter  / Google+

Facebook Comments

Sri Raghav

Admin