ಸ್ಮಾರ್ಟ್ ಸಿಟಿ ಯೋಜನೆಗೆ ಶಾಸಕ ಸೇಠ್ ತೊಂದರೆ

ಈ ಸುದ್ದಿಯನ್ನು ಶೇರ್ ಮಾಡಿ

smart--city
ಬೆಳಗಾವಿ,ಸೆ.28- ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಸ್ಥಳೀಯ ಶಾಸಕ ಫಿರೋಜ ಸೇಠ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋರ್ಟು ರಸ್ತೆಯಲ್ಲಿರುವ ವಿಶಾಲವಾದ ತಮ್ಮ ಹಾಗೂ ಡಮ್ಮಣಗಿ ಡೆವಲಪರ್ಸ್ ಒಡೆತನದ ಜಾಗದಲ್ಲಿ ವಾಣಿಜ್ಯ ಉಪಯೋಗದ ಕೆಲಸಗಳು ನಡೆಯಲಿವೆ ಎಂದು ತಿಳಿಸಿದರು.

ಕನಿಷ್ಠ ಆರು ಶಾಪಿಂಗ್ ಮಾಲ, 10 ಅಪಾರ್ಟಮೆಂಟ್, ಖಾಸಗಿ ಫೈವ್ ಸ್ಟಾರ್ ಹೋಟೆಲ, ದೇವಮಂದಿರ, ಕಲ್ಯಾಣ ಮಂಟಪ ಇತರ ಯೋಜನೆಗಳು ಬರಲಿದ್ದು ಈ ಯೋಜನೆ ಜಾರಿಗೆ ಶ್ರಮಿಸಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಎನ್. ಜಯರಾಮ ಜಿಲ್ಲಾ ಜನಪ್ರತಿನಿಧಿಗಳ ಗುಲಾಮರಂತೆ ವರ್ತಿಸುತ್ತಿದ್ದಾರೆ. ಎಸಿ, ತಹಶೀಲ್ದಾರ ಅಂಥ ಗುಲಾಮಗಿರಿ ಅಧಿಕಾರಿಗಳ ಬಗ್ಗೆ ಮುಂದಿನ ದಿನದಲ್ಲಿ ಗಂಭೀರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಶಾಸಕ ಫಿರೋಜ ಸೇಠ ನಮ್ಮ ಜಾಗವನ್ನು ಕಬಳಿಸುವ ಒಳ ಹುನ್ನಾರ ಹೊಂದಿದ್ದು ಸ್ಮಾರ್ಟ್ ಸಿಟಿ ಅಡಿ ನಾವು ಮಾಡುತ್ತಿರುವ ಯೋಜನೆ ನಗರ ನಾಗರಿಕರ ಸೇವೆಗೆ ಮತ್ತು ಉದ್ಯೋಗಕ್ಕೆ ಸಹಕಾರಿಯಾಗಲಿದೆ ಎಂದರು.

 

► Follow us on –  Facebook / Twitter  / Google+

Facebook Comments

Sri Raghav

Admin