ಸ್ಯಾಂಡಲ್ವುಡ್ ಸಿನಿ ತಾರೆಯರ “ಬಾಕ್ಸ್ ಕ್ರಿಕೆಟ್ ಲೀಗ್’ ಸದ್ದು

ಈ ಸುದ್ದಿಯನ್ನು ಶೇರ್ ಮಾಡಿ

BCL
ಸಿನಿ ತಾರೆಯರ ನೇತೃತ್ವದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿ ಬಾಕ್ಸ್ ಕ್ರಿಕೆಟ್ ಲೀಗ್‍ನಲ್ಲಿ ಈ ಬಾರಿ ಎಂಟು ತಂಡ ಆಡಲಿದೆ. ಇದರಲ್ಲಿ 27 ಪಂದ್ಯಗಳು ನಡೆಯಲಿದ್ದು, 150ಕ್ಕೂ ಹೆಚ್ಚು ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ.  ಕಳೆದ ವಾರ ದಾವಣಗೆರೆ ತಂಡದ ಪರಿಚಯವನ್ನು ಮಾಡಿಕೊಡ ಲಾಗಿತ್ತು. ಈವಾರ ಮಂಗಳೂರು ತಂಡವನ್ನು ಮಾದ್ಯಮದವರಿಗೆ ಪರಿಚಯಿಸಲಾಯಿತು. ಈ ತಂಡದ ಕ್ಯಾಪ್ಟನ್ ಆಗಿ ದಿಗಂತ್, ಉಪನಾಯಕಿಯಾಗಿ ನೀತೂ ಆಗಿದ್ದಾರೆ. ಪ್ರತಿ ಪಂದ್ಯದಲ್ಲಿ 10 ಜನ ಪುರುಷರು ಹಾಗೂ ಐವರು ಮಹಿಳೆಯರು ಆಡಲಿದ್ದಾರೆ. ಈ ಬಿಸಿಎಲ್‍ನ ಮುಖ್ಯಸ್ಥರಾಗಿ ಕಮ್ಮರ್ ವಹಿಸಿಕೊಂಡಿದ್ದು, ಕ್ರಿಯೇಟಿವ್ ಹೆಡ್ ಆಗಿ ಉದಯ ಪ್ರಕಾಶ್ ಕಾರ್ಯ ನಿರ್ವಹಿಸಲಿದ್ದಾರೆ. ಪಂದ್ಯಗಳಲ್ಲಿ ಭಾಗವಹಿಸುವ ಕಲಾವಿದರಿಗೆ ಸ್ಪಾಂಜ್ ಬಾಲ್ ಕ್ರಿಕೆಟ್ ತರಬೇತಿಯನ್ನು ಒಂದು ವಾರಗಳ ಕಾಲ ನೀಡಲಿದ್ದು, ನಂತರ ಅಖಾಡಕ್ಕೆ ಕಳುಹಿಸುತ್ತಾರೆ. ನಾಗರಬಾವಿಯಲ್ಲಿರುವ ಆಕಾಶ್ ಸ್ಟುಡಿಯೋದ ಹವಾನಿಯಂತ್ರಿತ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆಯಂತೆ.

Facebook Comments

Sri Raghav

Admin