ಸ್ಯಾಂಡಲ್‍ವುಡ್‍ನಲ್ಲಿ ಇಂದು ಮೂರು ತಾರೆಯರ ಹುಟ್ಟುಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

Upendrqa--01

ಬೆಂಗಳೂರು, ಸೆ.18- ಸ್ಯಾಂಡಲ್‍ವುಡ್‍ನಲ್ಲಿ ತಾರೆಯರ ಹುಟುಹಬ್ಬದ ಸಂಭ್ರಮ. ಅಭಿಮಾನಿಗಳ ಮೊಗದಲ್ಲಿ ಮಂದಹಾಸ . ಸಾಹಸ ಸಿಂಹ ಡಾ.ವಿಷ್ಣುವರ್ಧನ್, ರಿಯಲ್‍ಸ್ಟಾರ್ ಉಪೇಂದ್ರ ಹಾಗೂ ನಟಿ ಶೃತಿ ಅವರ ಹುಟ್ಟುಹಬ್ಬ ಸಂಭ್ರಮ. ಸ್ಯಾಂಡಲ್‍ವುಡ್‍ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 67ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಇಂದು ಭಾರತಿ ವಿಷ್ಣುವರ್ಧನ್ ಸೇರಿದಂತೆ ಕುಟುಂಬದ ಸದಸ್ಯರು ಮನೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿದರು. ವಿಭಾ ಚಾರಿಟಬಲ್ ಟ್ರಸ್ಟ್ ನೇತೃತ್ವದಲ್ಲಿ ಸಸಿ ನೆಡವು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಡುಗೋಡಿಯಲ್ಲಿರುವ ನ್ಯಾಷನಲ್ ಡೈರಿ ರಿಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

Shruti--1

ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಅಂಗವಾಗಿ ಅಳಿಯ ಅನಿರುದ್ಧ ಅಭಿನಯದ ರಾಜಾಸಿಂಹ ಚಿತ್ರದ ಟೀಸರ್ ಕೂಡ ಇಂದು ಬಿಡುಗಡೆ ಮಾಡಲಾಯಿತು. ವಿಷ್ಣು ಅಭಿಮಾನಿಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ಅಭಿಮಾನ್ ಸ್ಟುಡಿಯೋದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ರಿಯಲ್‍ಸ್ಟಾರ್ ಉಪೇಂದ್ರ ಅವರು 49ನೇ ಹುಟ್ಟುಹಬ್ಬವನ್ನು ತಮ್ಮ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸರಳವಾಗಿ ಆಚರಿಸಿಕೊಂಡರು.

Shruti--01

ಈ ಹಿಂದೆಯೇ ಉಪೇಂದ್ರ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ಅಭಿಮಾನಿಗಳಿಗೆ ಹೇಳಿದ್ದರಿಂದ ಇಂದು ಮನೆ ಮುಂದೆ ಅಭಿಮಾನಿಗಳು ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಿಸಿದರು.ಉಪ್ಪಿ ಹುಟ್ಟುಹಬ್ಬದ ಅಂಗವಾಗಿ ಉಪೇಂದ್ರ ಮತ್ತೆ ಹುಟ್ಟಿಬಾ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆ ಮಾಡಲಾಯಿತು.  ನಟಿ ಶೃತಿ ಅವರು ಕೂಡ ತಮ್ಮ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಚಿತ್ರದ ಚಿತ್ರೀಕರಣದ ಸ್ಥಳದಲ್ಲಿಯೇ ಶೃತಿ ಅವರು, ಚಿತ್ರತಂಡ ಹಾಗೂ ಕುಟುಂಬಸ್ಥರೊಂದಿಗೆ ಆಚರಿಸಿಕೊಂಡರು.

Facebook Comments

Sri Raghav

Admin