ಸ್ಯಾಂಡಲ್‍ವುಡ್‍ನಲ್ಲಿ ಬರ್ತ ಡೇ ರಂಗು : ವಿಷ್ಣು, ಉಪ್ಪಿ ಮತ್ತು ಶ್ರುತಿ ಹುಟ್ಟುಹಬ್ಬ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18-ಸೆಪ್ಟೆಂಬರ್ ಮಾಸ ಬಂತು ಎಂದರೆ ಸ್ಯಾಂಡಲ್‍ವುಡ್‍ನಲ್ಲಿ ಹುಟ್ಟುಹಬ್ಬಗಳ ಸರಮಾಲೆಯೇ ಬರುತ್ತದೆ. ಅದರಲ್ಲೂ ಸೆ.18ರಂದು ಚಂದನವನದಲ್ಲಿ ತ್ರಿಬಲ್ ಧಮಾಕವೇ ಸರಿ…. ಕನ್ನಡ ಚಿತ್ರರಂಗದ ಶ್ರೇಷ್ಠ ನಟ ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗಂತೂ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ.ಇನ್ನು ಚಿತ್ರ ನಟಿ ಶೃತಿ ಕೂಡ ತಮ್ಮ ಜನ್ಮದಿನವನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಿಕೊಳ್ಳುತ್ತಾರೆ.   ಇತ್ತೀಚೆಗೆ ಕರ್ನಾಟಕದಲ್ಲಿ ಕಾವೇರಿ ಗಲಭೆಯಿಂದ ತ್ರಿಮೂರ್ತಿ ಸ್ಟಾರ್‍ಗಳ ಜನ್ಮದಿನಕ್ಕೆ ಸ್ವಲ್ಪ ಹಿನ್ನಡೆಯಾಗಿದ್ದರೂ ಕೂಡ ಅಭಿಮಾನಿಗಳು ಉಪೇಂದ್ರ ಹಾಗೂ ವಿಷ್ಣುವರ್ಧನ್‍ರ ಮನೆ ಮುಂದೆ ಅರ್ಧ ರಾತ್ರಿಯಿಂದಲೇ ಜಮಾಯಿಸಿ ತಮ್ಮ ನೆಚ್ಚಿನ ತಾರೆಯರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದರು.

Vishnu

 

ಸಾಹಸಸಿಂಹ ವಿಷ್ಣುವರ್ಧನ್ ಮನೆಯಲ್ಲಿ ಜನ್ಮದಿನದ ವಾತಾವರಣ:
ಕಳೆದ ಕೆಲವು ವರ್ಷಗಳಿಂದ ಗೊಂದಲ ಸೃಷ್ಟಿಸಿದ್ದ ಸಾಹಸಸಿಂಹನ ಸಮಾಧಿ ಸ್ಥಳಾಂತರ ವಿಷಯ ಇದೀಗ ಒಂದು ಘಟ್ಟ ತಲುಪಿದ್ದು, ಮೈಸೂರಿನಲ್ಲಿ 5 ಎಕರೆ ಜಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ವಿಷ್ಣುವರ್ಧನ್‍ರ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸಲು ನಿರ್ಧರಿಸಿದ್ದೇವೆ ಎಂದು ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.  ಸಾಹಸಸಿಂಹನ 66ನೆ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಅಭಿಮಾನಿಗಳು ಎಂದಿನಂತೆ ನಗರದಲ್ಲಿರುವ ಅವರ ಸಮಾಧಿ ಬಳಿ ರಕ್ತದಾನ, ಅನ್ನದಾನ, ಆರೋಗ್ಯ ತಪಾಸಣಾ ಶಿಬಿರ, ಪುಸ್ತಕ ವಿತರಣೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಷ್ಣುವರ್ಧನ್‍ರ ಹುಟ್ಟುಹಬ್ಬ ಆಚರಿಸಿದರು.

Vishnu

Vishnu-1

Vishnu-2

 

Vishnu-3

Vishnu-4

Vishnu-5

ರಿಯಲ್ ಸ್ಟಾರ್ ಮನೆಯಲ್ಲಿ ಅಭಿಮಾನಿಗಳ ದಂಡು:
ರಿಯಲ್ ಸ್ಟಾರ್ ಉಪೇಂದ್ರ 48ನೆ ಹುಟ್ಟುಹಬ್ಬದ ಪ್ರಯುಕ್ತ ನಿನ್ನೆ ತಡರಾತ್ರಿಯಿಂದಲೇ ಮನೆ ಮುಂದೆ ಅಭಿಮಾನಿಗಳ ದಂಡೇ ನೆರೆದಿತ್ತು. ತಮ್ಮ ನೆಚ್ಚಿನ ನಟನ ಹಾವಭಾವಗಳನ್ನೇ ಹೋಲುವ ವೇಷಭೂಷಣ ತೊಟ್ಟು ಕೆಲ ಅಭಿಮಾನಿಗಳು ಬಂದಿದ್ದರೆ, ಇನ್ನು ಕೆಲವು ಅಭಿಮಾನಿಗಳೂ ಬೃಹತಾಕಾರದ ನಾನಾ ನಮೂನೆಯ ಕೇಕ್‍ಗಳನ್ನು ತಂದು ತಮ್ಮ ನÉಚ್ಚಿನ ನಟನ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಸ್ಟಾರ್‍ಗಳ ಜನ್ಮದಿನ ಬಂತೆಂದರೆ ಆಡಿಯೋ ಸಿಡಿಗಳ ಬಿಡುಗಡೆ, ಹೊಸ ಚಿತ್ರಗಳ ಅನೌನ್ಸ್ ಸಾಮಾನ್ಯ.ಅದರಂತೆ ಇಂದು ಕೂಡ ಉಪೇಂದ್ರ ಅವರ ನೂತನ ಚಿತ್ರ ಮೋದಿ ಅನಾವರಣಗೊಂಡರೆ, ಉಪೇಂದ್ರ ಹಾಗೂ ಸುದೀಪ್ ನಟಿಸುತ್ತಿರುವ ಮುಕುಂದಾ ಮುರಾರಿ ಚಿತ್ರದ ಆಡಿಯೋ ದಿನಾಂಕ ಪ್ರಕಟವಾಯಿತು.

u3

u1

u2

ಬಿಗ್‍ಬಾಸ್‍ಗೆ ಹುಟ್ಟುಹಬ್ಬದ ಸಂಭ್ರಮ:
ಬಿಗ್‍ಬಾಸ್ 3ನೆ ಆವೃತ್ತಿಯ ವಿಜೇತರಾದ ಚಿತ್ರನಟಿ ಶೃತಿ ಅವರು ಕೂಡ ತಮ್ಮ 40ನೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ತೆಲುಗು, ತಮಿಳು, ಮಲಯಾಳಂ ಭಾಷೆ ಚಿತ್ರಗಳಲ್ಲೂ ಕೂಡ ನಟಿಸಿರುವ ಶೃತಿ, ದಕ್ಷಿಣ ರಾಜ್ಯಗಳಲ್ಲೂ ಕೂಡ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin