ಸ್ಲಮ್‍ ನಲ್ಲಿ ನಡೆಯುವ ‘ಪ್ರೇಮಾಸುರ’ನ ಪ್ರೇಮಕಥೆ

ಈ ಸುದ್ದಿಯನ್ನು ಶೇರ್ ಮಾಡಿ

Premasura-1
ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹೊಸಥರದ ಪ್ರಯೋಗಗಳನ್ನು ಮಾಡುವ, ಹೊಸದಾದ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿರುವ ಚಿತ್ರತಂಡಗಳನ್ನು ಕನ್ನಡ ಸಿನಿಪ್ರೇಕ್ಷಕ ಪ್ರೊ ತ್ಸಾಹಿಸುತ್ತಿದ್ದಾನೆ, ಅದೇ ರೀತಿ ಸಂಪೂರ್ಣವಾಗಿ ಹೊಸಬರೇ ಸೇರಿ ನಿರ್ಮಿಸುತ್ತಿರುವ ಚಿತ್ರವೇ ಪ್ರೇಮಾಸುರ. ನಿರ್ದೇಶಕ ಫಣಿ ರಾಮಚಂದ್ರ ಅವರ ಜೊತೆ ಸಹಾಯಕರಾಗಿದ್ದ ಕ್ಯಾಲನೂರು ನಾಗೇಶ್ ಅವರು ಮೊದಲಬಾರಿಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಸ್ಲಮ್‍ನಲ್ಲಿ ವಾಸವಾಗಿರುವ ಎರಡು ಯುವ ಹೃದಯಗಳು ಪ್ರೀತಿಯೆಂಬ ಬಲೆಯಲ್ಲಿ ಬಿದ್ದಾಗ ಅವರಿಗೆ ಯಾವ ರೀತಿಯ ಅಡಚಣೆ, ಅಡ್ಡಿ ಆತಂಕಗಳು ಬಂದೊದಗುತ್ತವೆ. ನಾಯಕನಿಗೆ ತನ್ನ ಪ್ರೀತಿ ಸಿಗದೇ ಹೋದಾಗ ಯಾವರೀತಿ ಆತ ರಾಕ್ಷಸನ ರೂಪ ತಾಳಿ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬೆಳಗಾವಿ ಮೂಲದ ಶೀತಲ್‍ರಾಜ್ ನಾಯಕನಾಗಿ ನಟಿಸಿದ್ದು, ಹುಬ್ಬಳ್ಳಿ ಮೂಲದ ಚೆಲುವೆ ಮೃದುಲಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

ಇನ್ನು ನೆಗೆಟಿವ್ ಪಾತ್ರವೊಂದರಲ್ಲಿ ನವನಟಿ ಖುಷ್ಬು ಅಭಿನಯಿಸಿದ್ದಾರೆ. ಮೊನ್ನೆ ಈ ಚಿತ್ರಕ್ಕಾಗಿ ಸಿಗ್ನೇಚರ್ ಮೋವ್‍ಮೆಂಟ್ ಹಾಡೊಂದರ ಚಿತ್ರೀಕರಣ ರಾಕ್‍ಲೈನ್ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ತೆಲುಗಿನ ಬಾಹುಬಲಿ ಚಿತ್ರದಲ್ಲಿ ಕೆಲಸಮಾಡಿದ ಪ್ರೇಮ್‍ರಕ್ಷಿತ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಪತ್ರಕರ್ತರೊಂದಿಗೆ ಮಾತಿಗೆ ಕುಳಿತ ನಿರ್ದೇಶಕ ನಾಗೇಶ್, ಮನುಷ್ಯ ಪ್ರೀತಿಗೋಸ್ಕರ ಒಳ್ಳೆಯವನೂ ಆಗುತ್ತಾನೆ, ಕೆಟ್ಟವನೂ ಆಗುತ್ತಾನೆ. ಇದು ಚಿತ್ರದ ಒನ್‍ಲೈನ್ ಎನ್ನುತ್ತಾ ಇದರ ಜೊತೆಗೆ ಆ್ಯಕ್ಷನ್ ಕೂಡ ಇದ್ದು, ಈವರೆಗೆ ನೋಡಿರದ ಒಂದು ಕಥೆ ಇದರಲ್ಲಿದೆ ಎಂದು ಹೇಳಿದರು.

ತೆಲುಗಿನ ಖಳನಾಯಕ ಸುಬ್ಬರಾಜು ಈ ಚಿತ್ರದ ಮೂಲಕ ಮೊದಲಬಾರಿಗೆ ಕನ್ನಡ ಚಿತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದ ಸಾಹಿತ್ಯ ಹಾಗೂ ಸಂಭಾಷಣೆಗಳನ್ನು ನಾಗಮೂರ್ತಿ ಪಾಲಸಂದ್ರ ಬರೆದಿದ್ದಾರೆ. ಬೆಂಗಳೂರು, ಗುಡಿಬಂಡೆ, ಚಿಕ್ಕಾಬಳ್ಳಾಪುರ, ಬಾದಾಮಿ, ಐಹೊಳೆ, ಬಾಗೇಪಲ್ಲಿ ಅಲ್ಲದೆ ಮನಾಲಿಯಂಥ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಶ್ರೀಹರ್ಷ ಸಂಗೀತ ಸಂಯೋಜಿಸಿದ್ದಾರೆ. ಬಾಲಿವುಡ್  ಹೆಸರಾಂತ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಎರಡು ಗೀತೆಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಯೂಮಿನಿಯಂ ಫ್ಯಾಕ್ಟರಿ ಹೊಂದಿರುವ ಸಿ.ಎಲ್. ನಾಗರಾಜ್, ರಘು ಕ್ಯಾಲನೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಡಬ್ಬಿಂಗ್, ರೀರೆಕಾರ್ಡಿಂಗ್ ಮುಗಿದಿದ್ದು, ಸದ್ಯ ಹಾರರ್ ವರ್ಕ್ ನಡೆಯುತ್ತಿದೆ.

Premasura-4

Premasura-2

Premasura-5

 

Premasura-3

 

► Follow us on –  Facebook / Twitter  / Google+

Facebook Comments

Sri Raghav

Admin