ಸ್ವಚ್ಚ ಗಂಗೆ ಅಭಿಯಾನಕ್ಕೆ ಆರಂಭದಲ್ಲೇ ವಿಘ್ನ

ಈ ಸುದ್ದಿಯನ್ನು ಶೇರ್ ಮಾಡಿ

Clean-Ganga--01

ನವದೆಹಲಿ, ಏ.8-ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಮಾಮಿ ಗಂಗೆ (ಸ್ವಚ್ಚ ಗಂಗೆ) ಅಭಿಯಾನ ಮಂದಗತಿಯಲ್ಲಿ ಸಾಗಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ. 2,525 ಕಿ.ಮೀ.ಉದ್ದದ ಈ ಮಹಾನದಿಯನ್ನು ಸ್ವಚ್ಚಗೊಳಿಸುವ ಕಾರ್ಯ 2018ರ ನಿಗದಿತ ಗಡುವಿನೊಳಗೆ ಪೂರ್ಣಗೊಳ್ಳುವ ಲಕ್ಷಣಗಳು ಗೋಚರಿಸುತ್ತಿಲ್ಲ.   ಈ ಹಿಂದೆ ಅಸ್ತಿತ್ವದಲ್ಲಿದ್ದ ರಾಷ್ಟ್ರೀಯ ಗಂಗಾ ನದಿಪಾತ್ರ ಪ್ರಾಧಿಕಾರ(ಎನ್‍ಜಿಆರ್‍ಬಿಎ) ರದ್ದುಗೊಳಿಸಿ, ಆ ಸ್ಥಾನದಲ್ಲಿ ಗಂಗಾ ನಮಾಮಿ ರಾಷ್ಟ್ರೀಯ ಮಂಡಳಿ(ಎನ್‍ಎಂಸಿಜಿ) ಸ್ಥಾಪಿಸಲಾಗಿದೆ. ಆದರೆ ಈ ಹೊಸ ಸಂಸ್ಥೆಗೆ ಆರಂಭದಲ್ಲೇ ತೊಡಕು ಎದುರಾಗಿದೆ. ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ವಿಳಂಬವಾಗಿರುವುದು ಅಭಿಯಾನದ ಆಮೆಗತಿಗೆ ಕಾರಣ ಎನ್ನಲಾಗಿದೆ.

ಎನ್‍ಎಂಸಿಜಿಗೆ ಕಳೆದ ವರ್ಷವಷ್ಟೇ ಪ್ರಾಧಿಕಾರದ ಸ್ಥಾನಮಾನ ನೀಡಲಾಗಿದ್ದು, ಯೋಜನೆಯು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಕೇಂದ ಜಲಸಂಪನ್ಮೂಲ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ಆದಾಗ್ಯೂ, ಗಂಗಾ ನದಿ ಪ್ರವಹಿಸುವ ಐದು ರಾಜ್ಯಗಳಲ್ಲಿ ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದರಿಂದ ಅಭಿಯಾನ ಯೋಜಿತ ರೀತಿಯಲ್ಲಿ ಸಾಗುವ ನಿರೀಕ್ಷೆ ಇದೆ. ನಮಾಮಿ ಗಂಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin