ಸ್ವಚ್ಛತೆಗಿಂತ ಮೋದಿಯವರನ್ನು ಟೀಕಿಸುವುದೇ ಎಪಿಪಿ ಗುರಿಯಾಗಿದೆ : ಹರ್ಷವರ್ಧನ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

harshawardan

ಲೇಹ್ (ಜಮ್ಮು ಮತ್ತು ಕಾಶ್ಮೀರ), ಆ.30– ದೆಹಲಿ ನಗರವನ್ನು ಸ್ವಚ್ಛಗೊಳಿಸುವುದನ್ನು ಬಿಟ್ಟು ಆಮ್ ಆದ್ಮಿ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸುವ ಏಕೈಕ ವಿಷಯದತ್ತ ಗಮನ ಕೇಂದ್ರೀಕರಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಟೀಕಿಸಿದ್ದಾರೆ.  ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ, ಮೋದಿ ಯವರನ್ನು ಟೀಕಿಸುವುದನ್ನೇ ಸಂಪೂರ್ಣ ಪರಿಪಾಠ ಮಾಡಿಕೊಂಡಿದೆ ಎಂದು ಛೇಡಿಸಿದರು.  ಸ್ವಚ್ಛ ಭಾರತ ಅಭಿಯಾನ ಕುರಿತು ಮಾತನಾಡಿದ ಅವರು, ಕಸದ ಸಮಸ್ಯೆ ದೆಹಲಿಗಷ್ಟೇ ಸೀಮಿತವಾಗಿಲ್ಲ. ಎಲ್ಲ ನಗರಗಳದ್ದು ಇದೇ ಕಥೆ, ಬೆಳಗ್ಗೆ ಪೌರ ಕಾರ್ಮಿಕರು ಸ್ವಚ್ಛಗೊಳಿಸುತ್ತಾರೆ. ಆದರೆ ಮಧ್ಯಾಹ್ನದ ಹೊತ್ತಿಗೆ ಅದು ಕೊಳಕಾಗಿರುತ್ತದೆ. ಜನರ ಮನಸ್ಥಿತಿ ಬದಲಾಗದ ಹೊರತು ಸ್ವಚ್ಛತೆ ಪರಿಕಲ್ಪನೆ ಅನುಷ್ಠಾನಗೊಳ್ಳುವುದಿಲ್ಲ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin