ಸ್ವಚ್ಛತೆ ಜತೆಗೆ ಸ್ವಸ್ಥ ಭಾರತ ಬಗ್ಗೆ ಚಿಂತನೆ ಅಗತ್ಯ : ಸಚಿನ್ ತೆಂಡೂಲ್ಕರ್

ಈ ಸುದ್ದಿಯನ್ನು ಶೇರ್ ಮಾಡಿ

Sachi

ಬೆಂಗಳೂರು, ಆ.27- ಸ್ವಚ್ಛ ಭಾರತದೊಂದಿಗೆ ಸ್ವಸ್ಥ ಭಾರತದ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ. ಆರೋಗ್ಯ ಬಹಳ ಮುಖ್ಯವಾಗಿದ್ದು, ಅದರ ಅಗತ್ಯತೆ ಆಟಗಾರರಿಗೆ ಬಹಳಷ್ಟು ಮನವರಿಕೆಯಾಗಿರುತ್ತದೆ ಎಂದು ಕ್ರಿಕೆಟ್ನ ದಂತಕಥೆ ಮಾಸ್ಟರ್ಬ್ಲಾಸ್ಟರ್ ಸಚಿನ್ತೆಂಡೂಲ್ಕರ್ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದಲ್ಲಿ ನೂತನವಾಗಿ ಆರಂಭಿಸಲಾದ ಆಸ್ಟರ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯವಾದುದ್ದು, ಅದರಲ್ಲೂ ಆಟಗಾರರಿಗೆ ಅದರ ಅಗತ್ಯತೆ ಬಹಳಷ್ಟು ಬಾರಿ ಅರಿವಿಗೆ ಬಂದಿರುತ್ತದೆ. ನನಗೆ ಇದರ ಅನುಭವ ಸಾಕಷ್ಟು ಆಗಿದೆ ಎಂದರು.  ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ. ವೈದ್ಯರೊಂದಿಗೆ ಸುಮಧುರ ಬಾಂಧವ್ಯ ಹೊಂದಿ ಸೂಕ್ತ ಸಲಹೆ, ಸೂಚನೆಗಳನ್ನು ಕಾಲಕಾಲಕ್ಕೆ ಪಡೆಯಬೇಕು. ರೋಗ ಬಂದ ನಂತರ ವೈದ್ಯರ ಬಳಿ ಹೋಗುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದರು. ಸಿಂಗಾಪುರದಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ ಲಭ್ಯವಿದೆ ಎಂಬ ಕಾರಣಕ್ಕೆ ಎಲ್ಲರೂ ಅಲ್ಲಿನ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ನಮ್ಮಲ್ಲಿಗೆ ವೈದ್ಯಕೀಯ ಸೇವೆ ಪಡೆಯಲು ಅಲ್ಲಿಂದ ಬರುವಂತಾಗಬೇಕೆಂದು ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿನ ದರ ಜನಸಾಮಾನ್ಯರ ಕೈಗೆ ಎಟುಕುವುದಿಲ್ಲ. ಆಸ್ಪತ್ರೆಗಳು ಸೂಕ್ತ ದರ ನಿಗದಿಗೊಳಿಸಿದರೆ ಸರ್ಕಾರವೂ ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.  ಸಚಿವರಾದ ಕೃಷ್ಣಬೈರೇಗೌಡ, ಯು.ಟಿ.ಖಾದರ್, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೆ.ಎಸ್.ಈಶ್ವರಪ್ಪ, ಶಾಸಕ ಎನ್.ಎ.ಹ್ಯಾರಿಸ್, ಆಸ್ಪತ್ರೆಯ ಅಧ್ಯಕ್ಷ ಆಜಾದ್ಮೂಪೆನ್ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin