ಸ್ವಯಂಘೋಷಿತ ದೇವಮಹಿಳೆಯ ಬಂದೂಕು ಪ್ರೇಮದ ಹುಚ್ಚಾಟಕ್ಕೆ ಮದುಮಗನ ಚಿಕ್ಕಮ್ಮ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

deva-women

ಚಂಡೀಗಢ,ನ.16-ಸ್ವಯಂಘೋಷಿತ ದೇವತಾ ಮಹಿಳೆ(ದೇವಮಾನವಿ) ಯೊಬ್ಬಳು ವಿವಾಹ ಮಂಟಪದಲ್ಲಿ ನಡೆಸಿದ ಬಂದೂಕು ಪ್ರೇಮದ ಹುಚ್ಚಾಟಕ್ಕೆ ಮದುಮಗನ ಚಿಕ್ಕಮ್ಮ ಸ್ಥಳದಲ್ಲೇ ಸಾವನ್ನಪ್ಪಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ಕರ್ನಲ್ ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಈ ಮದುವೆಗೆ ಸಾಧ್ವಿದೇವಾ ಠಾಕೂರ್ ಎಂಬ ದೇವಮಾನವಿಯನ್ನು ಆಹ್ವಾನಿಸಲಾಗಿತ್ತು. ಅವಳೊಂದಿಗೆ 10-12 ಜನ ಬೆಂಬಲಿಗರು ಬಂದಿದ್ದರು. ವಿವಾಹ ಮುಹೂರ್ತದ ಸಂದರ್ಭ ಸಾಧ್ವಿ ತನ್ನ ಸಂತೋಷ ತಡೆಯಲಾರದೆ ಇದ್ದಕಿದ್ದಂತೆ ಕೈಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದಳು. ಈಕೆ ಹಾರಿಸಿದ ಗುಂಡಿಗೆ ಮದುಮಗನ ಚಿಕ್ಕಮ್ಮ ಸ್ಥಳದಲ್ಲೇ ಸಾವನ್ನಪ್ಪಿದಳು. ಇದೇ ವೇಳೆ ಸಾಧ್ವಿಯ ಬೆಂಬಲಿಗರು ಹಾರಿಸಿದ ಗುಂಡಿಗೆ ಇತರ ಮೂವರು ತೀವ್ರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆ ವೇದಿಕೆಯಲ್ಲಿ ನೃತ್ಯ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ನಡೆಯುತ್ತಿದ್ದಂತೆ ಸಾಧ್ವಿ ಮತ್ತು ಅವಳ ಬೆಂಬಲಿಗರು ಅಲ್ಲಿಂದ ಕಾಲ್ತಿಕ್ಕಿತ್ತಿದ್ದಾರೆ. ಹರಿಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸ್ವಂತ ಕ್ಷೇತ್ರ ಈ ಕರ್ನಲ್ ಟೌನ್.

 

► Follow us on –  Facebook / Twitter  / Google+

Facebook Comments

Sri Raghav

Admin