ಸ್ವಯಂ ಆಸ್ತಿ ಘೋಷಣೆ ಮಾಡುವಂತೆ ಪಿಡಿಒ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

huliyaru-8

ಹುಳಿಯಾರು, ಅ.4- ಗ್ರಾಪಂನ ಪ್ರತಿಯೊಬ್ಬ ಸದಸ್ಯರು ಪ್ರತಿವರ್ಷ ತಮ್ಮ ಹಾಗೂ ತಮ್ಮ ಕುಟುಂಬದ ಒಟ್ಟು ಆಸ್ತಿ ಮತ್ತು ಹೊಣೆಗಾರಿಕೆಯನ್ನು ಸ್ವಯಂ ಘೋಷಿಸಿಕೊಂಡು ಅಧಿಕಾರಿಗಳಿಗೆ ಶೀಘ್ರ ಮಾಹಿತಿ ತಂದು ಕೊಡುವಂತೆ ಪಿಡಿಒ ಸಿದ್ಧರಾಮಯ್ಯ ತಿಳಿಸಿದ್ದಾರೆ.ಗ್ರಾಪಂ ಕಚೇರಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿ, ಈ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಗ್ರಾಪಂಗೆ ಬಂದಿರುವ ಸೂತ್ತೊಲೆ ಪ್ರದರ್ಶಿಸಿದರು.ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಚುನಾಯಿತ ಸದಸ್ಯರು ತಮ್ಮ ಮತ್ತು ತಮ್ಮ ಕುಟುಂಬದ ಒಟ್ಟು ಆಸ್ತಿಯ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಸಂಬಂಧಪಟ್ಟ ತಾಪಂ, ಹಾಗೂ ಗ್ರಾಪಂ ಅಧಿಕಾರಿಗಳಿಗೆ ನೀಡುವಂತೆ ಸೂಚಿಸಿದ್ದಾರೆ.
ಗ್ರಾಪಂ ಚುನಾಯಿತ ಸದಸ್ಯರ ಆಸ್ತಿ ಘೋಷಣೆಯ ಮಾಹಿತಿ ಪಡೆದ ಗ್ರಾಪಂ ಅಧಿಕಾರಿಗಳು ವರದಿ ಸಿದ್ದಪಡಿಸಿ ತಾಲ್ಲೂಕು ಪಂಚಾಯಿತಿಗೆ ಕಳಿಸಿಕೊಡ ಬೇಕಿದೆ. ಇದೇ ರೀತಿ ತಾಲ್ಲೂಕು ಪಂಚಾಯಿತಿ ಸದಸ್ಯರು ಸಹಾ ತಮ್ಮ ಆಸ್ತಿ ಘೋಷಣೆಯ ಮಾಹಿತಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸ ಬೇಕು ಎಂದರು.ನಂತರ2016-17 ಹಾಗೂ 2017-18ನೇ ಸಾಲಿನಬಸವ ವಸತಿ ಯೋಜನೆಯಲ್ಲಿ ಬಂದಿರುವ ಒಟ್ಟು 7 ಮನೆಗಳ ಗ್ರಾಂಟ್‍ಗೆ ಸಂಬಂದಿಸಿದಂತೆ ಚರ್ಚೆಗಳು ನಡೆದು ಜನರಲ್ ಮನೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಈಗ ಬಂದಿರುವ ಕೇವಲ 7 ಮನೆಗಳನ್ನು ಯಾರಿಗೆ ಕೊಡುವುದು.

 

ಇವುಗಳನ್ನ ಹಂಚಲು ಹೋದರೆ ಜನರಿಂದ ಟೀಕೆ ಹಾಗೂ ಅಸಮಧಾನ ಎದುರಿಸಬೇಕಿದೆ. ಹಾಗಾಗಿ ಈ ಬಗ್ಗೆ   ತಾಲ್ಲೂಕುಕಾರ್ಯನಿರ್ವಾಹಣಾಧಿಕಾರಿಯೊಂದಿಗೆ ಚರ್ಚಿಸಿ ಹೆಚ್ಚು ಮನೆಗಳ ಗ್ರ್ಯಾಂಟ್ ಪಡೆಯುವಂತೆ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪಿಡಿಒ ಸಿದ್ಧರಾಮಯ್ಯ ಪ್ರತಿಕ್ರಿಯಿಸಿ ಈ ಬಗ್ಗೆ ಮೆಲಾಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಈ ಗ್ರಾಮ ಸಭೆಯನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಮುಂದಿನ ವಾರ ವಾರ್ಡ್‍ನ ಸಭೆಗಳನ್ನು ನಡೆಸಿ ನಂತರ ಗ್ರಾಮ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ತಾಪಂ ಸದಸ್ಯ ಹೆಚ್.ಎನ್.ಕುಮಾರ್, ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್, ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಉಮಮಹೇಶ್ ಹಾಜರಿದ್ದರು.

 

 

► Follow us on –  Facebook / Twitter  / Google+

Facebook Comments

Sri Raghav

Admin