ಸ್ವಯಂ ಗೃಹಬಂಧನ ವಿಧಿಸಿಕೊಂಡ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--01

ಬೆಂಗಳೂರು,ಸೆ.5-ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಉದ್ಘಾಟನೆಗೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆ ಬಿಟ್ಟು ಹೊರಬಾರದೆ ಸ್ವಯಂ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಬೆಳಗ್ಗೆ 10.30ಕ್ಕೆ ನಗರದ ಫ್ರೀಡಂಪಾರ್ಕ್‍ನಲ್ಲಿ ಬಿಜೆಪಿ ಯುವ ಮೋರ್ಚಾ ನಡೆಸಲು ಉದ್ದೇಶಿಸಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಯಡಿಯೂರಪ್ಪ ಫ್ರೀಡಂಪಾರ್ಕ್‍ನಿಂದ ಚಾಲನೆ ನೀಡಬೇಕಿತ್ತು.

ಮೊದಲೇ ನಿಗಧಿಯಾದಂತೆ ಬಿಎಸ್‍ವೈ ಜೊತೆ ಬಿಜೆಪಿ ಮುಖಂಡ ಆರ್.ಅಶೋಕ್, ಸಂಸದರಾದ ಶೋಭಾ ಕರಂದ್ಲಾಜೆ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್ ಸಿಂಹ ಸೇರಿದಂತೆ ಅನೇಕ ಮುಖಂಡರು ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದರು.  ಆದರೆ ಬೆಳಗ್ಗೆಯಿಂದಲೇ ಡಾಲರ್ಸ್ ಕಾಲೋನಿಯಲ್ಲಿದ್ದ ಯಡಿಯೂರಪ್ಪ ಮನೆಯಿಂದ ಹೊರ ಬರಲೇ ಇಲ್ಲ. ಇತ್ತ ನಿಗದಿಯಂತೆ ಫ್ರೀಡಂಪಾರ್ಕ್‍ಗೆ ಪಕ್ಷದ ಎಲ್ಲ ಮುಖಂಡರು ಆಗಮಿಸಿದ್ದರು. ಇನ್ನೇನು ಬಿಎಸ್‍ವೈ ಬರಲಿದ್ದಾರೆ. ಬೈಕ್ ರ್ಯಾಲಿಗೆ ಚಾಲನೆ ಸಿಗಲಿದೆ ಎಂದು ನೆರೆದಿದ್ದ ನೂರಾರು ಕಾರ್ಯಕರ್ತರು ಎದುರುನೋಡುತ್ತಿದ್ದರು.

ಡಾಲರ್ಸ್ ಕಾಲೋನಿಯ ಯಡಿಯೂರಪ್ಪನವರ ಮನೆ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ಅಪ್ಪಿತಪ್ಪಿಯೂ ಅವರು ಮನೆಯಿಂದ ಹೊರಬರದಂತೆ ಗೃಹಬಂಧನ ವಿಧಿಸಲಾಗಿತ್ತು.  ಬಿಎಸ್‍ವೈ ಫ್ರೀಡಂಪಾರ್ಕ್‍ಗೆ ಬಂದೇ ಬರುತ್ತಾರೆ ಎಂದು ಕಾರ್ಯಕರ್ತರು ನಿರೀಕ್ಷಿಸಿದರಾದರೂ ಡಾಲರ್ಸ್ ಕಾಲೋನಿಯಿಂದ ಹೊರಬರಲು ಸಾಧ್ಯವೇ ಆಗಲೇ ಇಲ್ಲ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin