ಸ್ವರ್ಗದಲ್ಲಿ ಒಂದಾದ ಜೀವಗಳು, ಇದೊಂದು ಮನಕಲಕುವ ಪ್ರೇಮಕಥೆ..!

ಈ ಸುದ್ದಿಯನ್ನು ಶೇರ್ ಮಾಡಿ

Love-Story--02

ಚನ್ನಪಟ್ಟಣ, ಅ.5- ಮನುಷ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಮೇಲೆ ನಂಬಿಕೆಯೇ ಹೊರಟು ಹೋಗಿದೆ. ಆದರೆ ಇದಕ್ಕೆ ತದ್ವಿರುದ್ದವಾದ ಉದಾಹರಣೆಯ ಸಾಲಿನಲ್ಲಿ ತಾಲ್ಲೂಕಿನ ಕುಕ್ಕೂರುದೊಡ್ಡಿ ಗ್ರಾಮದ ರಂಜಿತಾ ನಮಗೆಲ್ಲರಿಗೂ ಮಾದರಿಯಾಗಿ ನಿಲ್ಲುತ್ತಾಳೆ.
ಈಕೆ ನೀಡಿದ ಮಾತು ನಡೆಯಲಿಲ್ಲವೆಂಬ ಕಾರಣಕ್ಕೆ ತನ್ನ ಪ್ರಾಣವನ್ನು ತ್ಯಾಗ ಮಾಡಿ ಕೇವಲ ಬಾಯಿ ಮಾತಿಗೆ ಎಷ್ಟು ಬೆಲೆ ಇದೆ ಎಂಬುದನ್ನು ತೋರಿಸಿದ್ದಾಳೆ.
ಈಕೆ ಕುಕ್ಕೂರುದೊಡ್ಡಿ ನಿವಾಸಿಯಾಗಿದ್ದು ಈಕೆಯ ಸೋದರಮಾವ ಎಲೆಕ್ಟ್ರಿಕ್ ಅಂಗಡಿ ಮಳಿಗೆಯೊಂದನ್ನು ಬೆಂಗಳೂರಿನಲ್ಲಿ ನಡೆಸುತ್ತಿದ್ದು ಈತನ ಅಂಗಡಿಯಲ್ಲಿ ಓರ್ವ ಯುವಕ ಕೆಲಸ ಮಾಡುತ್ತಿರುತ್ತಾನೆ. ಆತನು ಕೂಡ ಸ್ಪುರದ್ರೂಪಿ ಮತ್ತು ಒಳ್ಳೆಯ ಗುಣಕ್ಕೆ ಹೆಸರುವಾಸಿಯಾಗಿ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತಿರುತ್ತಾನೆ.

ಆತನ ಒಳ್ಳೆಯ ನಡೆತೆಯನ್ನು ಮೆಚ್ಚಿದ ರಂಜಿತಾಳ ಸೋದರಮಾವ ಆತನನ್ನು ತನ್ನ ಸೋದರಿಯ ಮಗಳು ರಂಜಿತಾಳಿಗೆ ವಿವಾಹ ಮಾಡಿಕೊಡುವ ವಿಷಯ ಪ್ರಸ್ತಾಪ ಮಾಡಿರುತ್ತಾರೆ. ಆತನ ಪೋಷಕರೂ ಕೂಡ ರಂಜಿತಾಳನ್ನು ಒಪ್ಪಿ ಮದುವೆ ಮಾಡುವ ಆಲೋಚನೆಯನ್ನು ಸ್ವೀಕರಿಸುತ್ತಾರೆ. ಬಾಯಿಮಾತಿನ ವಿಚಾರ ವಿನಿಮಯವೇ ಹೊರತು ಒಪ್ಪಂದ ಆಗಿರಲಿಲ್ಲ.  ಹೀಗೆ ದಿನ ಕಳೆದಂತೆ ಆ ಯುವಕ ಕಬ್ಬಿಣವನ್ನು ತುಂಡರಿಸಿದಂತಹ ಸಂದರ್ಭದಲ್ಲಿ ಕಬ್ಬಿಣದ ಚೂರು ಕಣ್ಣಿಗೆ ತಾಗಿದ ಪರಿಣಾಮ ಆತನ ಕಣ್ಣು ತೀವ್ರತರವಾದ ಗಾಯಗೊಂಡಿತು. ನಂತರ ಡಾಕ್ಟರ್ ಈತನಿಗೆ ಕಣ್ಣುಗಳು ಬರುವುದು 50:50 ಎಂದೇಳಿದ ಪರಿಣಾಮ ಆ ಯುವಕ ಚಿಂತಾಕ್ರಾಂತನಾಗುತ್ತಾನೆ.

ಆ ಯುವಕ ನಾನೇನಾದರೂ ರಂಜಿತಾಳನ್ನು ಮದುವೆಯಾದರೆ ಮುಂದಿನ ದಿನಗಳಲ್ಲಿ ಕುರುಡನ ಜೊತೆ ಜೀವನ ನಡೆಸಬೇಕಾಗುತ್ತದೆ ಹಾಗಾಗಬಾರದು. ಆ ಹುಡುಗಿಯ ಭವಿಷ್ಯ ಹಸನಾಗಿರಬೇಕೆಂಬ ಸಂಕಲ್ಪ ಮಾಡಿದ ಆ ಯುವಕ ನಾನಿನ್ನು ಬದುಕಿದ್ದರೆ ಆಕೆಯನ್ನು ಕೊಟ್ಟು ಮದುವೆ ಮಾಡಿಬಿಡುತ್ತಾರೆ ಎಂದು ರಂಜಿತಾಳ ಉತ್ತಮ ಭವಿಷ್ಯವನ್ನು ನೆನೆದು ಆತ್ಮಹತ್ಯೆಗೆ ಶರಣಾಗುತ್ತಾನೆ. ಮದುವೆಯಾದರೆ ಆತನನ್ನೇ ಎಂಬ ಮನೋಭಾವನೆಯನ್ನು ಇಟ್ಟುಕೊಂಡಿದ್ದ ರಂಜಿತಾಳಿಗೆ ಆ ಯುವಕನ ಸಾವು ಸಿಡಿಲಂತೆ ಬಂದೆರಗಿದ್ದು ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆಕೆಗೆ ಇರಲಿಲ್ಲವೆಂದೆನಿಸುತ್ತದೆ. ಇದೇ ಕೊರಗಿನಲ್ಲಿ ಆಕೆಯೂ ಕೂಡ ಆತನ ದಾರಿಯನ್ನೇ ಹಿಡಿಯುತ್ತಾಳೆ.

ನೋಡಿ. ಹಸಮಣೆ ತುಳಿದು ನವಜೀವನ ಆರಂಭಿಸಬೇಕಾದ ಈ ಜೀವಗಳ ಬಾಳಲ್ಲಿ ಆ ವಿಧಿ ಹೇಗೆಲ್ಲಾ ಆಟವಾಡಿತು ಎಂದು. ಏಕೆಂದರೆ ಒಬ್ಬನನ್ನು ಪ್ರೀತಿಸಿ ಮತ್ತೊಬ್ಬರ ಜೀವನದ ಚೆಲ್ಲಾಟವಾಡುವ ಈಗಿನ ಹುಡುಗಿಯರು ಮುಂದಿನ ಐಷಾರಾಮಿ ಜೀವನವನ್ನಷ್ಟೇ ಬಯಸುತ್ತಾರೆ. ಈಗಿನ ಕಾಲದ ಹುಡುಗಿಯರಿಗೆಲ್ಲಾ ರಂಜಿತಾ ಮಾದರಿಯಾಗಿ ನಿಲ್ಲುತಾಳೆ.  ಆಕೆಯ ಜೀವನ ಚನ್ನಾಗಿರಲೆಂದು ಆತ ತನ್ನ ಪ್ರಾಣವನ್ನು ತ್ಯಾಗ ಮಾಡಿದರೆ, ಮದುವೆಯಂತಾದರೆ ಆತನನ್ನೇ ಮದುವೆಯಾಗುತ್ತೇನೆಂದು ಸಂಕಲ್ಪ ಮಾಡಿದ ಈಕೆ ಬೇರೊಬ್ಬರ ಜೊತೆ ಜೀವನ ಹಂಚಿಕೊಳ್ಳುವ ಮನಸ್ಸನ್ನು ಮಾಡದೆ ಆತನ ಹಾದಿಯನ್ನು ಹಿಡಿದಿದ್ದು ನಿಜಕ್ಕೂ ಬೇಸರದ ಸಂಗತಿಯಾದರೂ ಮಾನವೀಯತೆಯ ದೃಷ್ಟಿಯಿಂದ ಕಣ್ಮರೆಯಾದ ಈ ಎರಡು ಜೀವಗಳು ಸ್ವರ್ಗದಲ್ಲಾದರೂ ಒಂದಾಗಲಿ.

Facebook Comments

Sri Raghav

Admin