ಸ್ವರ್ಗಸ್ವೀಕೃತ ಮಾತೆ ದೇಗುಲ ವಾರ್ಷಿಕೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

hiriyuru--varshkostava

ಹಿರಿಯೂರು, ಆ.20-ನಗರದ ಸ್ವರ್ಗ ಸ್ವೀಕೃತ ಮಾತೆಯ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ಮೂರು ದಿನಗಳ ಕಾಲ ಸಡಗರ ಸಂಭ್ರಮದಿಂದ ಅತ್ಯಂತ ವೈಭವಯುತವಾಗಿ ನೆರವೇರಿತು.ಹಿರಿಯೂರು ಧರ್ಮಕ್ಷೇತ್ರದ ಧರ್ಮಗುರುಗಳಾದ ಪೌಲ್ ಡಿಸೋಜರವರು ಹಾಗೂ ಹರಿಹರ ಧರ್ಮಕ್ಷೇತ್ರದ ಧರ್ಮಗುರುಗಳಾದ ಫ್ರಾಂಕ್ಲಿನ್ ಡಿಸೋಜ ರವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಜೀವನದಲ್ಲಿ ಉಪಯೋಗವಾಗುವಂತಹ ಬೈಬಲ್‍ನ ಸಂದೇಶಗಳನ್ನು ಜನರಿಗೆ ತಿಳಿಸಿದರು.ಕಾರ್ಯಕ್ರಮದ ನಿಮಿತ್ತ, ಮಾತೆಯ ಅಲಂಕೃತ ತೇರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಪ್ರಾನ್ಸಿಸ್ ಸೆರಾವೊ ಚಾಲನೆ ನೀಡಿದರು.ಮಥಿಯಾಸ್, ಸ್ಟಾನಿಮರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin