ಸ್ವರ್ಣ ಗೆದ್ದರೆ ಪಿ.ವಿ.ಸಿಂಧು ಗೆ ಬಿಎಂಡಬ್ಲ್ಯೂ ಕಾರು ಆಫರ್

ಈ ಸುದ್ದಿಯನ್ನು ಶೇರ್ ಮಾಡಿ

BMW

ಹೈದರಾಬಾದ್,ಆ.19– ಭಾರತದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿರುವ ಮಹಿಳಾ ಪಿ.ವಿ.ಸಿಂಧು ರಿಯೋ ಒಲಿಂಪಿಕ್ನ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ಪ್ರವೇಶಿಸಿದ್ದು , ಒಂದು ವೇಳೆ ಫೈನಲ್ನಲ್ಲಿ ಅವರು ಸ್ವರ್ಣ ಗೆದ್ದರೆ ಬಿ.ಎಂ.ಡಬ್ಲ್ಯೂ ಕಾರು ಕೊಡುವುದಾಗಿ ಉದ್ಯಮಿ ವಿ.ಚಾಮುಂಡೇಶ್ವರಿನಾಥ್ ಬಂಪರ್ ಆಫರ್ ಪ್ರಕಟಿಸಿದ್ದಾರೆ. ಹೈದರಾಬಾದ್ನಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂ ಲ್ಕರ್ ಅವರಿಂದ ಕಾರು ಉಡುಗೊರೆ ನೀಡುತ್ತೇನೆಂದೂ ಅವರು ತಿಳಿಸಿದ್ದಾರೆ.  ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಸೃಷ್ಟಿಸಿರುವ ಹರಿಯಾಣದ ಬಾಕ್ಸರ್ ಸಾಕ್ಷಿ ಮಲಿಕ್ ನಂತರ ಹೈದರಾಬಾದ್ ಆಟಗಾರ್ತಿಗೆ ಉದ್ಯಮಿಯೊಬ್ಬರು ಈ ಭರ್ಜರಿ ಆಫರ್ ನೀಡಿದ್ದಾರೆ.

ಪಿ.ವಿ.ಸಿಂಧುಗೆ ಕೊಹ್ಲಿ ಶುಭಹಾರೈಕೆ
ಪೋರ್ಟ್ ಆಫ್ ಸ್ಪೈನ್, ಆ. 19- ಒಲಿಂಪಿಕ್ಸ್ನ ಇತಿಹಾಸದ ಬ್ಯಾಡ್ಮಿಂಟನ್ನಲ್ಲಿ ಬಂಗಾರದ ಪದಕವನ್ನು ಜಯಿಸುವತ್ತ ಹೆಜ್ಜೆ ಇಟ್ಟಿರುವ ಭಾರತದ ವೀರ ವನಿತೆ ಪಿ.ವಿ.ಸಿಂಧು ಅವರಿಗೆ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಟ್ವಿಟ್ಟರ್ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.  ಭಾರತದ 120 ಕೋಟಿಗೂ ಹೆಚ್ಚು ಜನರು ಕಾತರದಿಂದ ಕಾಯುತ್ತಿರುವ ಪಂದ್ಯದಲ್ಲಿ ನೀವು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ಎಲ್ಲರ ಹೃದಯ ಸಾಮ್ರಾಜ್ಯವನ್ನು ಗೆಲ್ಲಿ ಎಂದು ವಿರಾಟ್ ತಮ್ಮ ಶುಭಾಶಯದಲ್ಲಿ ಆಶಿಸಿದ್ದಾರೆ.  ರಿಯೋ ಒಲಿಂಪಿಕ್ಸ್ನಲ್ಲಿ ತಮ್ಮ ಸಾಮರ್ಥ್ಯವನ್ನು ಮೀರಿ ಪ್ರದರ್ಶನ ನೀಡಿದರೂ ಕೂಡ ಪದಕ ಜಯಿಸಲು ವಿಫಲರಾದ ಭಾರತದ ಆಟಗಾರರನ್ನು ಟೀಕಿಸುವುದು ಸರಿಯಲ್ಲ ಎಂದು ಕೊಹ್ಲಿ ಟ್ವಿಟರ್ನಲ್ಲಿ ಟ್ವಿಟ್ಟಿಸಿದ್ದರು.

Facebook Comments

Sri Raghav

Admin

Comments are closed.