ಸ್ವಾತಂತ್ರ್ಯೋತ್ಸವಕ್ಕೆ ಭರ್ಜರಿ ತಾಲೀಮು

ಈ ಸುದ್ದಿಯನ್ನು ಶೇರ್ ಮಾಡಿ

Ind-3

ಬೆಂಗಳೂರು,ಆ.12– ಸ್ವಾತಂತ್ರ್ಯ ದಿನಾಚರಣೆಯಂದು ನಗರದ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ನಡೆಯುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ಇದೇ 15ರಂದು ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಮ್ಮಿಕೊಂಡಿರುವ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಭರ್ಜರಿ ತಾಲೀಮು ನಡೆಸಲಾಗುತ್ತಿದೆ. ನಗರದ ಖಾಸಗಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.   ಪಂಜಿನ ಕವಾಯತು, ಬೈಕ್‍ನಲ್ಲಿ ಸಾಹಸ ಪ್ರದರ್ಶನ ಹಾಗೂ ಶಾಲಾ ವಿದ್ಯಾರ್ಥಿಗಳು ನಡೆಸಿಕೊಡುವ, ದೇಶ ಭಕ್ತಿ ಸಾರುವ ನೃತ್ಯ ಪ್ರದರ್ಶನ ನೋಡುಗರ ಮೈನವಿರೇಳುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಧ್ವಜಾರೋಹಣ ನೆರವೇರಿದ ನಂತರ ಸಂಜೆವರೆಗೂ ಕಾರ್ಯಕ್ರಮಗಳು ನಡೆಯಲಿದ್ದು, ಈಗಾಗಲೇ ವೇದಿಕೆ ಸಜ್ಜಾಗುತ್ತಿದೆ. ವೀಕ್ಷಕರಿಗಾಗಿ ಹಾಸನಗಳ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಇನ್ನು ಹೆಲಿಕಾಪ್ಟರ್ ಮೂಲಕ ತ್ರಿವರ್ಣಧ್ವಜಕ್ಕೆ ಹೂಮಳೆ ಕಾರ್ಯಕ್ರಮದ ಕೇಂದ್ರಬಿಂದುವಾಗಿದೆ. ಇದಕ್ಕೂ ಸಹ ಪ್ರಾಯೋಗಿಕವಾಗಿ ಇಂದು ಹೆಲಿಕಾಪ್ಟರ್ ಹಾರಾಟವನ್ನು ಸಹ ನಡೆಸಲಾಯಿತು.

► Follow us on –  Facebook / Twitter  / Google+

ind Ind-1 Ind2 Ind-2
Ind-4 Ind-5 Ind-7 Ind-8

Facebook Comments

Sri Raghav

Admin