ಸ್ವಾತಂತ್ರ್ಯೋತ್ಸವದಂದು ಸ್ವೀಟ್ ತಿಂದ 71 ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Achool

ಸಂಬಾಲ್‍ಪುರ್ (ಒಡಿಶಾ), ಆ.17– ಒಡಿಶಾದ ಸಂಬಾಲ್‍ಪುರ್ ಜಿಲ್ಲೆಯ ಸ್ಥಳೀಯ ಗ್ರಾಮ ಪಂಚಾಯ್ತಿ ವಿತರಿಸಿದ ಸಿಹಿ ತಿಂದು ಕನಿಷ್ಠ 71 ಶಾಲಾ ಮಕ್ಕಳು ಅಸ್ವಸ್ಥರಾದ ಘಟನೆ ಸ್ವಾತಂತ್ರ್ಯೋತ್ಸವ ದಿನದಂದು ನಡೆದಿದೆ.  ಸಂಬಾಲ್‍ಪುರದ ಲಿಪಿಂಡಾ ಪಂಚಾಯ್ತಿ ಸ್ವಾತಂತ್ರ್ಯೋತ್ಸವ ದಿನದಂದು ಸಿಹಿ ಬೂಂದಿಯನ್ನು ಮಕ್ಕಳಿಗೆ ವಿತರಿಸಿತು. ಬೂಂದಿ ಸೇವಿಸಿದ 5 ರಿಂದ 12 ವರ್ಷದ ಮಕ್ಕಳು ಅಸ್ವಸ್ಥರಾದರು. ತಕ್ಷಣ ಅವರನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಲಾಯಿತು.  51 ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಉಳಿದ 20 ಮಕ್ಕಳನ್ನು ವೀಕ್ಷಣೆಯಲ್ಲಿಡಲಾಗಿದೆ. ಕಲುಷಿತ ಆಹಾರದಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಸಂಬಾಲ್‍ಪುರ ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin