ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ಬಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

sadfASDGFDASG

ಚಿತ್ರದುರ್ಗ, ಆ.15-ಸ್ವಾತಂತ್ರ ದಿನಾಚರಣೆಯ ಆಂಗವಾಗಿ ನೃತ್ಯ ಮಾಡುತ್ತಿದ್ದ 5 ನೇ ತರಗತಿ ವಿದ್ಯಾರ್ಥಿ ಕುಸಿದು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕ್ಯಾದಿಗೆರೆ ಗ್ರಾಮದಲ್ಲಿ ನಡೆದಿದೆ.  ಸರ್ಕಾರಿ ಪ್ರಾಥಮಿಕ ಶಾಲೆಯ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಲ್ಕೆರೆ ತಾಲೂಕಿನ ಯರಗಟ್ಟೆ ಯ ದಿಲೀಪ್ ಸಾವನ್ನಪ್ಪಿದ ಇಳಿವಯಸ್ಸಿನ ಬಾಲಕ .
ಕಳೆದ ಕೆಲವುದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ದಿಲೀಪ್. ಇಂದು ಸ್ವಾತಂತ್ರ ದಿನಾಚರಣೆಗೆ ಸಡಗರ ಸಂಭ್ರಮದಿಂದ ಬಂದಿದ್ದ, ಶಾಲಾ ಮಕ್ಕಳೆಲ್ಲರೂ ಸಹ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು . ದಿಲೀಪ್ ಸಹ ತನ್ನ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿದ್ದ ವೇಳೆ ದಿಡೀರನೆ ಕುಸಿದು ಬಿದ್ದಿದ್ದಾನೆ. ತಕ್ಷಣ ಶಾಲಾ ಶಿಕ್ಷಕರು ಬಾಲಕನ ಬಳಿ ಬಂದು ನೀರು ಕುಡಿಸಿದರು ಉಪಚರಿಸಿದರು .ಅದರೆ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ .

► Follow us on –  Facebook / Twitter  / Google+

Facebook Comments

Sri Raghav

Admin