ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬಿಗಿ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

Security-1

ಬೆಂಗಳೂರು, ಆ.13- ಎಪ್ಪತ್ತನೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸ್ವಾತಂತ್ರ್ಯೋವಕ್ಕೆ ಮಾಣಿಕ್ ಷಾ ಪರೇಡ್ ಮೈದಾನ ಸಕಲ ರೀತಿಯಲ್ಲೂ ಸಜ್ಜಾಗಿದೆ. ನಗರದ ಎಲ್ಲ ಹೊಟೇಲ್, ಲಾಡ್ಜ್, ತಂಗುದಾಣ, ಇನ್ನಿತರ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.   ಸ್ವಾತಂತ್ರ್ಯೋತ್ಸವದ ಭದ್ರತೆಗಾಗಿ 12 ಡಿಸಿಪಿ, 22 ಎಸಿಪಿ, 55 ಪಿಐ, 105 ಪಿಎಸ್‍ಐ, 79 ಎಎಸ್‍ಐ, 169 ಹೆಡ್‍ಕಾನ್ಸ್‍ಟೆಬಲ್, 416 ಕಾನ್ಸ್‍ಟೆಬಲ್, 70 ಮಹಿಳಾ ಪಿಸಿ, ಮಫ್ತಿಯಲ್ಲಿ 151 ಲೀಸರು, 106 ಗುಪ್ತಚರ ಸಿಬ್ಬಂದಿ, 800 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ನಗರ ಪೊ ಲೀಸ್ ಆಯುಕ್ತ ಎಂ.ಎನ್.ಮೆಘರಿಕ್ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

Security-4

ಈಗಾಗಲೇ ಕಳೆದ ಒಂದನೆ ತಾರೀಖಿನಿಂದಲೇ 24 ಗಂಟೆಗಳ ಕಾಲ ಮಾಣಿಕ್ ಷಾ ಪರೇಡ್ ಮೈದಾನದ ಸುತ್ತ ಗಸ್ತು ಮಾಡಲಾಗುತ್ತಿದೆ. ಅಲ್ಲದೆ, ಮೈದಾನ ಮತ್ತು ನಗರದ ಸುತ್ತ ಗರುಡ ಕಮಾಂಡೊ ಪಡೆ ನಿಯೋಜನೆ ಮಾಡಲಾಗಿದೆ ಎಂದರು.  ಪ್ರತಿದಿನ 270 ಹೈಟೆಕ್ ಹೊಯ್ಸಳ, 320 ಚೀತಾ, 2 ಕಮಾಂಡೊ ವಾಹನ, 2 ಬುಲೆಟ್ ಪ್ರೂಫ್ ವಾಹನ ನಿಯೋಜನೆ ಮಾಡಲಾಗಿದೆ. ಕಳೆದ ಆ.15ರಂದು 40 ಕೆಎಸ್‍ಆರ್‍ಪಿ, 2 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಭದ್ರತೆಗೆ  ನಿಯೋಜನೆ ಮಾಡಲಾಗುತ್ತದೆ. ಮೈದಾನದ ಸುತ್ತ 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ ಎಂದು ತಿಳಿಸಿದರು.

Security-2

ಮುಂಜಾಗ್ರತಾ ಕ್ರಮವಾಗಿ ಡ್ರೋಣ್, ಬಲೂನ್ ಹಾಗೂ ದೂರ ನಿಯಂತ್ರಿತ ವಿಮಾನಗಳ ಹಾರಾಟ ನಿಷೇಧ, ಮೈದಾನದ ತಪಾಸಣೆಗೆ 2 ಬಾಂಬ್ ನಿಷ್ಕ್ರಿಯ ದಳ, 6 ಎಎಸ್‍ಸಿ ಚೆಕ್ ತಂಡ, ಸ್ಕೈ ಸೆಂಟ್ರಿಗಳು, 5 ಅಂಡರ್ ವೆಹಿಕಲ್ ಸರ್ಚ್‍ಜೆಂಗ್, 2 ಎಕ್ಸ್‍ಪೋಸಿವ್ ವೆಪರ್ ಡಿಟೆಕ್ಟರ್ಸ್‍ಗಳನ್ನು ಅಳವಡಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ನಗರ ಜಿಲ್ಲಾಧಿಕಾರಿ ವಿ.ಶಂಕರ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Security-1-5'

Security-3

► Follow us on –  Facebook / Twitter  / Google+

Facebook Comments

Sri Raghav

Admin