ಸ್ವಾತಂತ್ರ್ಯೋತ್ಸವ ವಿಡಿಯೋದಲ್ಲಿ ಪಾಕ್ ಜೆಟ್..!

ಈ ಸುದ್ದಿಯನ್ನು ಶೇರ್ ಮಾಡಿ

Pak-01

ನವದೆಹಲಿ, ಆ.13- ಭಾರತ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕಾಗಿ ಚಿತ್ರೀಕರಿಸಲಾದ ವಿಡಿಯೋದಲ್ಲಿ ತ್ರಿವರ್ಣದೊಂದಿಗೆ ಪಾಕಿಸ್ತಾನದ ಯುದ್ಧ ವಿಮಾನದ ದೃಶ್ಯ ಇರುವುದು ಕಂಡುಬಂದು ಸರ್ಕಾರಿ ಅಧಿಕಾರಿಗಳು ಮುಜುಗರಕ್ಕೆ ಒಳಗಾದರು. ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿ ಆನಂತರ ಟ್ವೀಟರ್‍ಗೆ ಹಾಕಲಾಗಿದ್ದ ಈ ವಿಡಿಯೋವನ್ನು ತೆಗೆದುಹಾಕಿದರು. ಪಾಕಿಸ್ತಾನ ವಾಯುಪಡೆಯ ಜೆಎಫ್-17 ಥಂಡರ್ ಫೈರ್ ಜೆಟ್, ಭಾರತದ ತೇಜಸ್ ಹಗುರ ಯುದ್ಧ ವಿಮಾನವನ್ನು ಬಹುತೇಕ ಹೋಲುವುದರಿಂದ ಈ ಪ್ರಮಾದವಾಗಿದೆ. ಜನಸಾಮಾನ್ಯರಿಗೆ ಈ ಎರಡೂ ಸಮರ ವಿಮಾನಗಳ ಬಗ್ಗೆ ವ್ಯತ್ಯಾಸ ಗೊತ್ತಾಗುವುದಿಲ್ಲವಾದರೂ ಭಾರತದ ಸೇನಧಿಕಾರಿಯೊಬ್ಬರು ಈ ಸೂಕ್ಷ್ಮ ಸಂಗತಿಯನ್ನು ಗಮನಿಸಿದರು. ಲೋಪದೋಷವನ್ನು ಈಗ ಸರಿಪಡಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin