ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವಂತೆ ಮೋದಿಗೆ ಪತ್ರ ಬರೆದ ಬಲೂಚ್ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

Letter

ನವದೆಹಲಿ,ಸೆ.8-ಒಂದೆಡೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿ ಸಂಘಟನೆಗಳ ಹಿಂಸಾಚಾರ, ಇನ್ನೊಂದೆಡೆ ಪಾಕಿಸ್ತಾನಿ ಸೇನೆಯ ಕಿರುಕುಳ-ಉಪಟಳ. ಇದು ಪಾಕ್ ಆಕ್ರಮಿತ ಬಲೂಚಿಸ್ತಾನದಲ್ಲಿ ಕಂಡುಬರುತ್ತಿರುವ ನಿತ್ಯನೂತನ ನರಕ. ಇಲ್ಲಿನ ನಾಗರಿಕರ ಹಕ್ಕುಗಳನ್ನು ಪಾಕಿಸ್ತಾನ ದಮನ ಮಾಡಿದೆ. ಅಲ್ಲಿ ಸ್ವಾತಂತ್ರ್ಯಕ್ಕಾಗಿ ಬಹುದಿನಗಳಿಂದ ಚಳವಳಿ-ಹೋರಾಟ ನಡೆಯುತ್ತಿವೆ. ಉಗ್ರರ ಉಪಟಳ ಮತ್ತು ಪಾಕಿಸ್ತಾನದ ದೌರ್ಜನ್ಯದಿಂದ ಬಲಿಪುಶವಾಗಿರುವ ಬಲೂಚಿಸ್ತಾನ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದು, ಬಲೂಚಿಸ್ತಾನ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವಂತೆ ಕೋರಿದ್ದಾರೆ.  ಕೆನಡಾದ ಅಂಕಣಕಾರ ಹಾಗೂ ಲೇಖಕ ತಾರಿಖ್ ಫತ್ಹಾ ಆ ಮಹಿಳೆಯು ಪ್ರಧಾನಿಗೆ ಬರೆದಿರುವ ಪತ್ರದ ಸಾರಾಂಶವನ್ನು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿದೆ. ಅದಕ್ಕೆ ಕಾಶ್ಮೀgವು ಗಂಭೀರ ವಿಷಯವಾಗಿದೆ ಆದರೆ ಭಾರತವು ಪಾಕ್‍ನ ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಚಳವಳಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ತನ್ನ ವಿದೇಶಿ ನೀತಿಯನ್ನು ಬಲೂಚಿಸ್ತಾನವನ್ನು ಸೇರಿಸುವ ಮೂಲಕ ಭಾರತವು ಶಿಕ್ಷಣ ಸುಧಾರಣೆಗೆ ನೆರವಾಗಬೇಕು. ಬಲೂಚಿಸ್ತಾನವನ್ನು ಪಾಕ್‍ನಿಂದ ಬಿಡುಗಡೆಗೊಳಿಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಬೇಕು ಎಂದು ಆ ಸಂತ್ರಸ್ತ ಮಹಿಳೆ ಮನವಿ ಮಾಡಿದ್ದಾರೆ.   ಕಾಶ್ಮೀರವನ್ನು ಆಕ್ರಮಿಸಿಕೊಳ್ಳುವುದು ಪಾಕಿಸ್ತಾನದ ಬಯಕೆಯಾಗಿದೆ. ಪಾಕಿಸ್ತಾನವು ಕಾಶ್ಮೀರವನ್ನು ತನ್ನ ವಿದೇಶಿ ನೀತಿಯಲ್ಲಿ ಸೇರಿಸಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಪಾಕಿಸ್ತಾನ ಸೇನೆಯು ಸಹ ನೇರ ಹೋರಾಟ ನಡೆಸುತ್ತಿದೆ. ಇದಕ್ಕೆ ಪಾಕ್ ಮಾಧ್ಯಮ ಕೂಡ ಬೆಂಬಲ ನೀಡುತ್ತಿದೆ. ಆದರೆ ಭಾರತವು ಹಿಂದಿನಿಂದಲೂ ಇತರ ದೇಶಗಳ ಆಂತರಿಕ ವಿಷಯಗಳಲ್ಲಿ ತಟಸ್ಥ ಧೋರಣೆ ತಳೆದಿದೆ ಎಂದು ವಿಶ್ಲೇಷಣೆ ಮಾಡಿರುವ ಬಲೂಚ್ ಮಹಿಳೆ, ಭಾರತವು ಈ ನಿಟ್ಟಿನಲ್ಲಿ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin