ಸ್ವಾತಿ ಸೆಕೆಂಡ್ ಇನ್ನಿಂಗ್ಸ್

ಈ ಸುದ್ದಿಯನ್ನು ಶೇರ್ ಮಾಡಿ

sweta

ಈ ಮಾಯಾ ನಗರಿಯ ಮಾಯಾಜಾಲವೇ ಒಂದು ರೀತಿ ವಿಶೇಷ ಎನ್ನಬಹುದು. ಏಕೆಂದರೆ, ಒಮ್ಮೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಎಲ್ಲೇ ಹೋದರೂ ಮತ್ತೆ ಅವರನ್ನು ಚಿತ್ರರಂಗದತ್ತ ಕೈ ಬೀಸುತ್ತಲೇ ಇರುತ್ತದೆ.ಅದರಲ್ಲಿ ಕೆಲವರು ನೆಲೆಯೂರಿದರೆ ಮತ್ತೆ ಕೆಲವರು ಚಿತ್ರರಂಗದ ಸಹವಾಸವೇ ಬೇಡ ಎಂದು ದೂರ ಸರಿಯುತ್ತಾರೆ. ಇನ್ನೂ ಕೆಲವರು ಚಿತ್ರರಂಗವನ್ನು ಬಿಟ್ಟ ನಂತರವೂ ಮತ್ತೆ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲು ಎರಡನೆ ಇನ್ನಿಂಗ್ಸ್ ಕೂಡ ಆರಂಭಿಸುತ್ತಾರೆ. ಆ ರೀತಿ ಮತ್ತೆ ಪುಟಿದೆದ್ದುಬಂದಂತಹ ನಟಿಮಣಿಯೇ ಈ ಸ್ವಾತಿ.

ಮೈಸೂರು ಮೂಲದ ಸ್ವಾತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡು ನಂತರ ಕೆಲವು ಆ್ಯಡ್ ಕಂಪೆನಿಗಳಲ್ಲಿ ಕಾಣಿಸಿಕೊಂಡ ಈ ಬೆಡಗಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ ಮಾದೇಶ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದರು. ತದನಂತರ ವಾರಸುದಾರ, ಉಡ, ಗಜೇಂದ್ರ, ದಂಡುಪಾಳ್ಯ, ಬಿಡಲಾರೆ ಹಾಗೂ ಊಜಾ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಂತಹ ಈ ಬೆಡಗಿ ಇದ್ದಕ್ಕಿದ್ದಂತೆ ಸ್ಯಾಂಡಲ್‍ವುಡ್‍ನಿಂದ ಕಣ್ಮರೆಯಾದಳು.ಸುಮಾರು ಎರಡು ವರ್ಷಗಳ ನಂತರ ಮತ್ತೆ ಈ ಬೆಡಗಿ ಗಾಂಧಿನಗರ ಪ್ರವೇಶಿಸಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮುಖಕ್ಕೆ ಹಾಗೂ ದೇಹದ ಕೆಲವು ಭಾಗಗಳಿಗೆ ಭಾರೀ ಪೆಟ್ಟಾಗಿದ್ದೇ ಇದಕ್ಕೆ ಕಾರಣವಂತೆ. ಈವರೆಗೆ ಆಟೋ ಎಂದರೆ ತುಂಬ ಭಯವಂತೆ.

ಇವರ ಈ ದುಸ್ಥಿತಿಗೂ ಆಟೋ ಕಾರಣವಾಗಿದ್ದು, ಇನ್ನು ಮುಂದೆ ಆಟೋ ಹತ್ತುವುದಿಲ್ಲ ಎಂದು ಕೂಡ ಹೇಳಿದ್ದಾರೆ.ಪಕ್ಕದ ತಮಿಳು ಚಿತ್ರರಂಗದಲ್ಲಿ ಎರಡು ಸಿನಿಮಾಕ್ಕೆ ನಾಯಕಿಯಾಗಿ ನಟಿಸಿದ್ದು, ಎರಡು ಮಾತುಕತೆ ಹಂತದಲ್ಲಿದೆ. ಇತ್ತೀಚೆಗಷ್ಟೆ ಹೊಸ ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದು, ಗಣೇಶ ಹಬ್ಬದಂದು ಮುಹೂರ್ತ ಆಚರಿಸಿಕೊಳ್ಳುವ ಸಾದ್ಯತೆ ಇದೆ. ಸದ್ಯ ಶುಭವಿವಾಹ ಧಾರವಾಹಿಯಲ್ಲಿ ನಕರಾತ್ಮಕ ಪಾತ್ರದಲ್ಲಿ ನಟಿಸುತ್ತಿದ್ದು, ನವನೀತದಿಂದ ಸ್ಯಾಂಡಲ್‍ವುಡ್‍ನಲ್ಲಿ ಭದ್ರವಾಗಿ ತಳವೂರುವ ಅಭಿಲಾಷೆಯನ್ನು ಹೊಂದಿರುವ ಸ್ವಾತಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin