ಹಂದಿ ಹಿಡಿದಾಯ್ತು, ಈಗ ನಾಯಿ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

belgam-8
ಹುಬ್ಬಳ್ಳಿ,ಅ.29- ಮಹಾನಗರ ಪಾಲಿಕೆಯಕೋರ್ಟ್ ಮಾರ್ಗದ ಮಧ್ಯೆರಸ್ತೆಯಲ್ಲಿ ಬೀಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿಎಲ್ಲೆಂದರಲ್ಲಿಅಡ್ಡಾದಿಡ್ಡಿಅಡಚಣೆಯನ್ನುಂಟು ಮಾಡುತ್ತಿದ್ದು, ವಾಹನ ಸವಾರರು, ಪಾದಚಾರಿಗಳು ಸಂಚರಿಸದಂತಾದರೆ, ಮನೆಯ ಅಂಗಳದಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಓಡಾಡದಂತಾಗಿದೆಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಾಜನನಿಬಿಡ ಪ್ರದೇಶವಾದ ಈ ರಸ್ತೆಯಲ್ಲಿಕೋರ್ಟ್, ದೇವಸ್ಥಾನ, ಲೋಕೋಪಯೋಗಿ ಇಲಾಖೆ, ಉಪನಗರದಠಾಣೆ ಕಚೇರಿಗಳು, ಸಾಲು ಸಾಲು ಅಂಗಡಿಗಳು, ಮನೆಗಳಿದ್ದು, ನಿತ್ಯಕೋರ್ಟ್‍ಕೇಸ್, ಪೂಜೆಗೆ, ವಿವಿಧ ಕೆಲಸ ಕಾರ್ಯ, ವ್ಯಾಪಾರಕ್ಕಾಗಿಅಪಾರ ಸಂಖ್ಯೆಯಲ್ಲಿಜನರುಓಡಾಡುತ್ತಾರೆ.ಸ್ಟೇಶನ್‍ಗೆ ಹೋಗುವ ಮುಖ್ಯರಸ್ತೆಯಾಗಿದ್ದರಿಂದ ಬಸ್, ದ್ವಿಚಕ್ರವಾಹನ ಸೇರಿದಂತೆಎಲ್ಲತರಹದ ವಾಹನಗಳು ಓಡಾಡುತ್ತವೆ. ಇದರಿಂದಯಾವಾಗಲೂಜನಸಂದಣಿತುಂಬಿರುತ್ತದೆ.ಆದರೆ, ರಸ್ತೆಯಲ್ಲಿ ಬೀಡಾಡಿ ನಾಯಿಗಳು ಎಲ್ಲೆಂದರಲ್ಲಿ ನಿಲ್ಲುವುದು, ಮಲಗುವುದು, ರಸ್ತೆಯಲ್ಲಿಕಚ್ಚಾಡುವುದು ಮಾಡುತ್ತವೆ. ಇದರಿಂದಜನಭಯದಲ್ಲಿಓಡಾಡುವಂತಾಗಿದೆಎಂದುದೂರಿದ್ದಾರೆ.ಬೀಡಾಡಿ ನಾಯಿಗಳ ವಾಹಳಿಯಿಂದ ಕೇಸ್, ಪೂಜೆಗೆ ಹಾಗೂ ವ್ಯಾಪಾರ, ಕೆಲಸಕ್ಕೆ ಬರುವವರುಕಂಗಾಲಾಗಿದ್ದಾರೆ.

ವಾಹನ ಸವಾರರು,ಪಾದಚಾರಿಗಳು,ಸಾರ್ವಜನಿಕರುರಸ್ತೆಯಲ್ಲಿಓಡಾಡದಂತೆನಾಯಿಗಳ ಹಿಂಡು ಬೀಡು ಬಿಟ್ಟಿರುವುದರಿಂದ ಮತ್ತು ಎಲ್ಲೆಂದರಲ್ಲಿ ಕಡಿದಾಡುತ್ತಿರುವುದರಿಂದ ಯಾವಾಗ ಕಡಿಯುತ್ತವೆ ಎಂದು ತಿಳಿಯುವುದಿಲ್ಲ.  ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಪಾಲಿಕೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದೇಕೆಎಂದು ಸ್ಥಳೀಯ ಜನರ, ಸಾರ್ವಜನಿಕರ ಪ್ರಶ್ನೆಗೆಉತ್ತರಿಸಬೇಕಾದ ಅಧಿಕಾರಿಗಳು ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ? ಇಂತಹ  ಜನಜಂಗುಳಿಯ ಪ್ರದೇಶದಲ್ಲಿಯೇ 10-15 ನಾಯಿಗಳ ಹಿಂಡು ಬೀಡು ಬಿಟ್ಟದ್ದು, ಇನ್ನೂ ಹಿಂದುಳಿದ ಜನರಓಣಿ, ಕೇರಿಗಳಲ್ಲಿ ಎಷ್ಟಿರಬೇಡ?ಅಧಿಕಾರಿಗಳು ನಿತ್ಯ ಸಂಚರಿಸುವ ಮಾರ್ಗದಲ್ಲೆ ಹಿಂಡುಗಟ್ಟಲೇ ನಾಯಿಗಳು ರಸ್ತೆಯಲ್ಲಿಅಡ್ಡಾದಿಡ್ಡಿರಾಜಾರೋಷವಾಗಿಅಲೆದಾಡುತ್ತವೆ. ಆದರೆ, ಅವರಕಣ್ಣಿಗೆ ಇವು ಕಾಣಿಸುವುದಿಲ್ಲ. ಹಂದಿಗಳ ಕಾರ್ಯಾಚರಣೆ ನಡೆಸಿದ ಹಾಗೆ ನಾಯಿಗಳನ್ನು ಸಾಗಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಲಿ ಎಂದು ವಕೀಲರು, ವ್ಯಾಪಾರಸ್ಥರು, ದೇವಸ್ಥಾನಕಮಿಟಿ, ಸಾರ್ವಜನಿರುಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin