ಹಕ್ಕಿಗೆ ಡಿಕ್ಕಿಹೊಡೆದ ದಸರಾ ಜಾಲಿರೈಡ್ ಹೆಲಿಕಾಪ್ಟರ್‍

ಈ ಸುದ್ದಿಯನ್ನು ಶೇರ್ ಮಾಡಿ

Dasara-Helicator--00005

ಮೈಸೂರು, ಅ.1- ದಸರಾ ಜಾಲಿರೈಡ್ ಹೆಲಿಕಾಪ್ಟರ್‍ಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆದರೆ, ಒಳಗಡೆ ಇದ್ದ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಿಲ್ಲ. ಇಂದು ಬೆಳಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ಲಲಿತ ಮಹಲ್ ಹೆಲಿಪ್ಯಾಡ್ ಬಳಿ ಜಾಲಿರೈಡ್ ಹಾರಾಟ ನಡೆಸುತ್ತಿದ್ದ ಹೆಲಿಕಾಪ್ಟರ್ ಗಾಜಿಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ. ಹಕ್ಕಿ ಡಿಕ್ಕಿ ಹೊಡೆದ ರಭಸಕ್ಕೆ ಗಾಜು ಪುಡಿಪುಡಿಯಾಗಿದ್ದರೂ ಒಳಗಿದ್ದ ಪ್ರಯಾಣಿಕರು ಗಾಬರಿಗೊಂಡರು. ಪೈಲೆಟ್‍ನ ಸಮಯ ಪ್ರಜ್ಞೆಯಿಂದ ಹೆಲಿಕಾಪ್ಟರ್‍ಅನ್ನು ಕೆಳಕ್ಕಿಳಿಸಿ ಪ್ರಯಾಣಿಕರ ಆತಂಕ ನಿವಾರಿಸಿದರು.

Facebook Comments

Sri Raghav

Admin