ಹಕ್ಕಿಜ್ವರ ಇಲ್ಲ : ಮೈಸೂರು ಮೃಗಾಲಯ ವೀಕ್ಷಣೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು,ಜ.29-ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿಜ್ವರ ಹರಡಿದೆ ಎಂಬ ಶಂಕೆಯಿಂದಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಯಲ್ಲಿ ನೆಗೆಟಿವ್ (ನಕರಾತ್ಮಕ) ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಕಮಲ ಕರಿಕಾಳನ್ ತಿಳಿಸಿದ್ದಾರೆ.  ಮೊದಲ ಹಂತದಲ್ಲಿ ಪಕ್ಷಿಗಳ ರಕ್ತ ಹಾಗೂ ಹಿಕ್ಕೆ ಮಾದರಿ(ಸ್ಯಾಂಪಲ್)ಗಳನ್ನು ಜ.13ರಂದು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಎಂದು ಬಂದಿದೆ.

ಜ.25ರಂದು 2ನೇ ಹಂತದಲ್ಲಿ ಪಕ್ಷಿಗಳ ಮಾದರಿಯನ್ನು ಭೋಪಾಲ್‍ನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈಸೆಕ್ಯೂರಿಟಿ ಅನಿಮಲ್ ಡಿಸೀಸ್ ಘಟಕಕ್ಕೆ ಕಳುಹಿಸಿದ್ದೇವೆ. ಫೆ.2ರಂದು ಫಲಿತಾಂಶ ತಿಳಿದುಬರಲಿದೆ ಎಂದು ತಿಳಿಸಿದರು.  2ನೇ ಹಂತದಲ್ಲಿಯೂ ಫಲಿತಾಂಶ ನೆಗೆಟಿವ್ ಎಂದು ಬಂದರೆ ಅತಿಶೀಘ್ರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಮೃಗಾಲಯವನ್ನು ಮುಕ್ತಗೊಳಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin