ಹಕ್ಕುಪತ್ರ ನೀಡಿಕೆ ವಿಳಂಬ : ಅಧಿಕಾರಿಗಳಿಗೆ ಬೆಂಡೆತ್ತಿದ್ದ ಕಾಗೋಡು

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmappa

ಶಿವಮೊಗ್ಗ,ಆ.8– ಸರ್ಕಾರದ ಆದೇಶವಿದ್ದರೂ ಬಗರ್ ಹುಕುಂ  ಹಕ್ಕುಪತ್ರ ನೀಡದೆ ವಿಳಂಬ ಮಾಡುತ್ತಿರುವ ಜಿಲ್ಲೆಯ ಅರಣ್ಯಾಧಿಕಾರಿಗಳು, ತಹಸೀಲ್ದಾರ್‍ಗಳಿಗೆ  ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಎಂದಿನ ಶೈಲಿಯಲ್ಲೇ  ಬೆಂಡೆತ್ತಿದ್ದ ಪ್ರಸಂಗ ಜಿಲ್ಲಾ ಕೆಡಿಪಿ ಸಭೆಯಲ್ಲಿ ನಡೆಯಿತು.  ಅರಣ್ಯಾಧಿಕಾರಿಗಳು, ತಹಸೀಲ್ದಾರರು ಸರ್ಕಾರದ ಆದೇಶದ ಹೊರತಾಗಿಯೂ ಜನಪರ ಕಾರ್ಯಗಳಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದಕ್ಕೆ ಗರಂ ಆದ ತಿಮ್ಮಪ್ಪ , ಆದರೆ ಸರಿಯಾಗಿ ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗು ಎಂದು ಚಾಟಿ ಬೀಸಿದರು.
ನೌಕರರು, ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಬೇಕು, ಬೇಕಾಬಿಟ್ಟಿ ಕೆಲಸ ಮಾಡಬಾರದು, ಸರ್ಕಾರ ಆದೇಶ ನೀಡಿದ್ದರೂ ಬಗರ್ ಹುಕುಂ ಹಕ್ಕುಪತ್ರ ನೀಡಲು ನಿಮಗೇನು ಧಾಡಿ ಎಂದು ಪ್ರಶ್ನಿಸಿದರು.   ಶಾಸಕ ಮಧುಬಂಗಾರಪ್ಪ ಶಾರದಾ ಪುಣ್ಯ ನಾಯ್ಕ ಮತ್ತಿತರರು ಸಭೆಯಲ್ಲಿದ್ದರು.

Facebook Comments

Sri Raghav

Admin