ಹಗರಣಮುಕ್ತ ಆಡಳಿತ ಆಡಳಿತ ನೀಡಿದ್ದೇನೆ : ಮೇಯರ್ ಮಂಜುನಾಥರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

priya

ಬೆಂಗಳೂರು, ಆ.30- ಕಳೆದ ಒಂದು ವರ್ಷದ ನನ್ನ ಅವಯಲ್ಲಿ ಹಗರಣಮುಕ್ತ ಆಡಳಿತ ಮತ್ತು ಬಡ್ಡಿ ಮುಕ್ತ ಬೆಂಗಳೂರು ಮಾಡುವಲ್ಲಿ ಅಲ್ಪಪ್ರಮಾಣದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮೇಯರ್ ಮಂಜುನಾಥರೆಡ್ಡಿ ಇಂದಿಲ್ಲಿ ತಿಳಿಸಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಡಾ.ರಾಜ್‌ಕುಮಾರ್ ವಾರ್ಡ್‌ನ ಅಂಬೇಡ್ಕರ್ ಮೈದಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಆಡಳಿತ ನಡೆಸಿದವರು ಸ್ಪೆಷಲ್ ಎಲ್‌ಒಸಿ ನೆಪದಲ್ಲಿ ಭಾರೀ ಹಗರಣ ನಡೆಸಿದ್ದರು. ಆದರೆ, ಜೆಡಿಎಸ್ ಸಹಕಾರದೊಂದಿಗೆ ಕಳೆದ ವರ್ಷ ನಾವು ಅಕಾರಕ್ಕೆ ಬಂದ ನಂತರ ನಾನಾಗಲಿ, ಉಪಮೇಯರ್ ಹೇಮಲತಾ ಗೋಪಾಲಯ್ಯಅವರಾಗಲಿ ಯಾವುದೇ ಹಗರಣ ನಡೆಸದೆ ಸ್ವಚ್ಛ ಆಡಳಿತ ನಡೆಸಿದ್ದೇವೆ ಎಂದು ಅವರು ಹೇಳಿದರು.  ಈ ಹಿಂದೆ ಹಗರಣದಲ್ಲಿ ಶಾಮೀಲಾದ ಕೆಲವು ಅಕಾರಿಗಳನ್ನು ನಾವು ಅಮಾನತುಗೊಳಿಸಿದ್ದೇವೆ. ಇದರ ಜತೆಗೆ ಬಡ್ಡಿ ಮುಕ್ತ ಬೆಂಗಳೂರು ಮಾಡುವ ನನ್ನ ಕನಸಿಗೆ ಸಾಕಾರ ರೂಪ ಕೊಟ್ಟಿದ್ದೇನೆ ಎಂದರು.
ಬೆಂಗಳೂರಿನ 11 ಪಾರಂಪರಿಕ ಕಟ್ಟಡಗಳನ್ನು ಹಿಂದಿನ ಆಡಳಿತದ ಅವಯಲ್ಲಿ ಅಡಮಾನ ಇಟ್ಟಿದ್ದರು. ನಾವು ಅಕಾರಕ್ಕೆ ಬಂದ ನಂತರ ಎರಡು ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಿದ್ದೇವೆ. ಕೆಲವೇ ದಿನಗಳಲ್ಲಿ ಮತ್ತೆ ಮೂರು ಕಟ್ಟಡಗಳನ್ನು ಅಡಮಾನ ಮುಕ್ತಗೊಳಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.ಮಳೆ ಅನಾಹುತಕ್ಕೆ ಕಾರಣವಾಗುವ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಎಂದು ಹೇಳಿದವರೇ ಇದೀಗ ಒತ್ತುವರಿ ಸ್ಥಳಕ್ಕೆ ತೆರಳಿ ಶೋ ಕೊಟ್ಟು ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೆಲ ಬಿಜೆಪಿ ನಾಯಕರು ನಿರುದ್ಯೋಗಿಗಳಾಗಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಪರೋಕ್ಷವಾಗಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.  ರಾಜ್ಯದಲ್ಲಿ ಹಗರಣಮುಕ್ತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 7ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ರಾಜಕಾಲುವೆ ನಿರ್ಮಾಣಕ್ಕೆ 800 ಕೋಟಿ ರೂ. ನೀಡಿದೆ. ಈಗಾಗಲೇ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಉಳಿದ ಕಾಮಗಾರಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ. ಐದಾರು ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ.  ನಾವು ನಮ್ಮ ಅವಯಲ್ಲಿ ಉತ್ತಮ ಆಡಳಿತ ನಡೆಸಿದ್ದೇವೆ ಎಂಬ ಅಭಿಮಾನ ನಮಗಿದೆ ಎಂದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುತ್ಥಳಿಯನ್ನು ಸ್ಥಾಪಿಸಲು ಬಿಬಿಎಂಪಿ ಅಗತ್ಯ ಸಹಕಾರ ನೀಡಿದೆ. ಆದರೆ, ಕೆಲ ಅಕಾರಿಗಳ ದಿಢೀರ್ ವರ್ಗಾವಣೆಯಿಂದ ಪುತ್ಥಳಿ ನಿರ್ಮಾಣಕ್ಕೆ ಸ್ವಲ್ಪ ಅಡೆ-ತಡೆ ಉಂಟಾಯಿತು. ಆದರೆ, ಈ ಭಾಗದ ಶಾಸಕರಾದ ಪ್ರಿಯಾಕೃಷ್ಣ ಅವರು ಸ್ವಂತ ಹಣ ಖರ್ಚು ಮಾಡುವ ಮೂಲಕ ಪುತ್ಥಳಿ ಕಾರ್ಯ ಪೂರ್ಣಗೊಳ್ಳಲು ಸಹಕರಿಸಿದ್ದಾರೆ ಎಂದು ಹೇಳಿದರು.  ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಜನಪ್ರಿಯ ನಾಯಕರಾಗಿರುವ ಪ್ರಿಯಾಕೃಷ್ಣ ಅವರು ಭವಿಷ್ಯದಲ್ಲಿ ಮತ್ತಷ್ಟು ಉನ್ನತ ಸ್ಥಾನ ಅಲಂಕರಿಸಲಿದ್ದಾರೆ ಎಂದು ಮೇಯರ್ ಮಂಜುನಾಥ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪ್ರಿಯಾಕೃಷ್ಣ ವಹಿಸಿದ್ದರು. ಸ್ಥಳೀಯ ಬಿಬಿಎಂಪಿ ಸದಸ್ಯೆ ರೂಪಾಲಿಂಗೇಶ್ವರ್, ಸದಸ್ಯರಾದ ಜಿ.ಪದ್ಮಾವತಿ, ಜಿ.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಲಿಂಗೇಶ್ವರ್ ಮತ್ತಿತರರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin