ಹಗಲು ಮೀನಿನ ವ್ಯಾಪಾರ, ರಾತ್ರಿ ಮನೆಗಳ್ಳತನ : ಕೊನೆಗೂ ಸಿಕ್ಕಿ ಬಿದ್ದ್ದ ಹಳೆ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

byatarayanapura

ಬೆಂಗಳೂರು, ಫೆ.8- ಫುಟ್‍ಪಾತ್‍ನಲ್ಲಿ ಮೀನು ವ್ಯಾಪಾರ ಮಾಡಿಕೊಂಡು ತನ್ನ ದುಶ್ಚಟಗಳಿಗಾಗಿ ಹಗಲು ಮತ್ತು ರಾತ್ರಿ ವೇಳೆ ಮನೆಗಳ್ಳತನ, ಸರಗಳ್ಳತನ ಮಾಡುತ್ತಿದ್ದ ಹಳೆ ಕಳ್ಳನನ್ನು ಬ್ಯಾಟರಾಯನಪುರ ಪೊಲೀಸರು ಬಂಸಿ 17 ಪ್ರಕರಣಗಳನ್ನು ಪತ್ತೆ ಹಚ್ಚಿ 30 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮೊಬೈಲ್ ವಶಪಡಿಸಿಕೊಂಡಿದ್ದಾರೆ.  ಬನ್ನೇರುಘಟ್ಟ ರಸ್ತೆ ನಿವಾಸಿ ಇರ್ಫಾನ್ ಪಾಷ (26) ಬಂತ ಹಳೆ ಕಳ್ಳನಾಗಿದ್ದು, ಈತನ ಬಂಧನದಿಂದ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯ 10 ಮನೆಗಳ್ಳತನ ಪ್ರಕರಣ, ಒಂದು ಹಗಲು ಕಳ್ಳತನ, ಸರಗಳ್ಳತನ, ಕನ್ನಗಳವು ಸೇರಿ 13 ಪ್ರಕರಣಗಳು, ರಾಜರಾಜೇಶ್ವರಿ ನಗರ, ಚಂದ್ರ ಲೇಔಟ್, ಚಾಮರಾಜಪೇಟೆ ಮತ್ತು ಜೆಜೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳವು, ಕನ್ನಗಳವು, ಸುಲಿಗೆ ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನದ ಆಭರಣಗಳು, 500 ಗ್ರಾಂ ಬೆಳ್ಳಿ ವಸ್ತುಗಳು, ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಈತ ಸಿಟಿ ಮಾರ್ಕೆಟ್‍ನ ಫುಟ್‍ಪಾತ್‍ನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದು, ಅನೇಕ ದುಶ್ಚಟಗಳ ದಾಸನಾಗಿದ್ದನು. ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ರಾತ್ರಿ ಮತ್ತು ಹಗಲು ವೇಳೆಯಲ್ಲಿ ಮನೆಗಳ ತೆರೆದ ಬಾಗಿಲ ಮೂಲಕ ಒಳನುಗ್ಗಿ ಆಭರಣಗಳನ್ನು ಕಳ್ಳತನ ಮಾಡುವುದು, ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳ್ಳತನ ಮಾಡಿರುವುದು, ಒಂಟಿಯಾಗಿ ಓಡಾಡುವ ಮಹಿಳೆಯರ ಸರಗಳನ್ನು ಅಪಹರಿಸುತ್ತಿದ್ದನು.

ಈತನ ವಿರುದ್ಧ ಈ ಹಿಂದೆ ರಾಮಮೂರ್ತಿನಗರ, ಕೆಂಗೇರಿ, ಕೆಜೆ ನಗರ, ಬೊಮ್ಮನಹಳ್ಳಿ ಸೇರಿದಂತೆ ಇನ್ನೂ ಅನೇಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನ್ನಗಳವು, ಮನೆಗಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಹೊರಬಂದಿದ್ದನು.  ಉಪ ಪೊಲೀಸ್ ಆಯುಕ್ತ ಅನುಚೇನ್ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಸಜಿತ್ ನೇತೃತ್ವದಲ್ಲಿ ಬ್ಯಾಟರಾಯನಪುರ ಠಾಣೆ ಇನ್ಸ್‍ಪೆಕ್ಟರ್ ಶಿವಸ್ವಾಮಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin