ಹಣಕ್ಕಾಗಿ ತಂದೆಗೇ ಪ್ರಾಣಬೆದರಿಕೆ ಹಾಕಿದ ಮಗನ ವಿರುದ್ಧ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Father-Son

ಕೆಜಿಎಫ್, ಏ.27-ಹಣಕ್ಕಾಗಿ ಪೀಡಿಸಿ ಹೆತ್ತ ತಂದೆ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ ಮಗನ ವಿರುದ್ಧ ಆಂಡ್ರಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಸಂಬಳ್ಳಿ ಹೋಬಳಿ ಕೆ.ಸಿ.ರೆಡ್ಡಿಗಾನಹಳ್ಳಿ ಗ್ರಾಮದ ನಿವಾಸಿ ಸೀನಪ್ಪ(75) ತನ್ನ ಮಗ ಮಂಜುನಾಥ್ ಮತ್ತು ಸೊಸೆ ಮಂಜಮ್ಮ ಅವರಿಂದ ಹಲ್ಲೆಗೊಳಗಾದವರು. 50 ಸಾವಿರ ಹಣ ಕೊಡು ಇಲ್ಲಾಂದ್ರೆ ಮನೆ ಬಿಟ್ಟು ಹೋಗು ಎಂದು ಮಂಜುನಾಥ್ ಮತ್ತು ಆತನ ಪತ್ನಿ ಅವಾಚ್ಯಶಬ್ದಗಳಿಂದ ನಿಂದಿಸಿ, ಕೈಗಳಿಂದ ಹಲ್ಲೆ ನಡೆಸಿ ಮನೆಯಲ್ಲಿದ್ದ ಪಾತ್ರೆಯನ್ನೆಲ್ಲಾ ಜಖಂಗೊಳಿಸಿ ಮಚ್ಚು ತೋರಿಸಿ ನಿನ್ನನ್ನು ಸಾಯಿಸಿ ಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸೀನಪ್ಪ ಆಂಡ್ರಸನ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.   ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin