ಹಣಕ್ಕಾಗಿ ಬಿಲ್ಡರ್ ಗೆ ರವಿ ಪೂಜಾರಿಯಿಂದ ಪ್ರಾಣ ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ravi-Poojari--02
ಥಾಣೆ, ಏ.24-ಉದ್ಯಮಿಗಳು ಮತ್ತು ಸ್ಥಿತಿವಂತರಿಗೆ ದುಸ್ವಪ್ನವಾಗಿರುವ ಕುಖ್ಯಾತನ ಭೂಗತ ರೌಡಿ ರವಿ ಪೂಜಾರಿ ಮತ್ತೆ ಬಿಲ್ಡರ್ (ರಿಯಲ್ ಎಸ್ಟೇಟ್ ಕುಳ) ಒಬ್ಬರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕಿದ್ದಾನೆ. ರವಿ ಪೂಜಾರಿಯಿಂದ ದೂರವಾಣಿ ಕರೆಗಳು ಬರುತ್ತಿದ್ದು, 2 ಕೋಟಿ ರೂ.ಗಳ ಹಫ್ತಾ ವಸೂಲಿಗಾಗಿ ಧಮ್ಕಿ ಹಾಕುತ್ತಿದ್ದಾನೆ ಎಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪಟ್ಟಣದ ಬಿಲ್ಡರ್ ಪೊಲೀಸರಿಗೆ ದೂರು ನೀಡಿದ್ದಾರೆ.  ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ನನಗೆ ಜನವರಿಯಿಂದ ಹಲವು ಬಾರಿ ದೂರವಾಣಿ ಕರೆ ಮಾಡಿ ಹಣಸುಲಿಗೆಗಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಅವರು ಮಂಬ್ರಾ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.  ವಿವಾದಿತ ಲ್ಯಾಂಡ್ ಪ್ರಾಜೆಕ್ಟ್‍ನಿಂದ ತಾವು ದೂರ ಹೋಗಬೇಕು. ಇಲ್ಲದಿದ್ದರೆ ತಮ್ಮನ್ನು ಕೊಲ್ಲುವುದಾಗಿ ಆತ ಹೇಳಿದ್ಧಾನೆ. ಅಲ್ಲದೇ ತಮ್ಮನ್ನು ಮುಗಿಸಲು ಪ್ರತಿಸ್ಪರ್ಧಿ ರವಿಪೂಜಾರಿಗೆ 3 ಕೋಟಿ ರೂ.ಗಳನ್ನು ನೀಡಲು ತಯಾರಾಗಿದ್ದಾರೆ ಎಂಬ ಸಂಗತಿಯೂ ಆತನ ದೂರವಾಣಿ ಕರೆಯಿಂದ ತಿಳಿದುಬಂದಿದೆ ಎಂದು ಬಿಲ್ಡರ್ ದೂರಿನಲ್ಲಿ ವಿವರಿಸಿದ್ದಾರೆ.

Facebook Comments

Sri Raghav

Admin