ಹಣದ ಅಮಲಿನಲ್ಲಿ ಮೆರೆಯುವ ಭೂಗಳ್ಳರಿಗೆ ತಕ್ಕಶಾಸ್ತಿ : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cm-open

ಬೆಂಗಳೂರು, ಆ.31-ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಬೇಕು, ಕಠಿಣ ಶಿಕ್ಷೆಯಾಗುವಂತಾಗಬೇಕು, ಭೂ ಕಬಳಿಕೆ ಕೇವಲ ಕಬಳಿಕೆದಾರರಿಂದಷ್ಟೇ ಆಗಿಲ್ಲ, ಸರ್ಕಾರಿ ಅಧಿಕಾರಿಗಳೂ ಇದಕ್ಕೆ ನೆರವು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದರು.  ಕಂದಾಯ ಭವನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಅನ್ವಯ ಸ್ಥಾಪನೆಯಾದ ವಿಶೇಷ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದನ ಜಂಟಿ ಸಮಿತಿ ವರದಿ ಪ್ರಕಾರ ಬೆಂಗಳೂರು ಒಂದರಲ್ಲೇ 1.22 ಲಕ್ಷ ಸಾವಿರ ಎಕರೆ ಜಾಗ ಒತ್ತುವರಿಯಾಗಿದೆ ಎಂದು ಅಂಕಿ ಅಂಶ ನೀಡಿದರು.

34 ಸಾವಿರ ಒತ್ತುವರಿ ಪ್ರಕರಣಗಳಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಭೂಮಿಗೆ ಬೆಲೆ ಹೆಚ್ಚಾಗಿರುವುದರಿಂದ ಭೂ ಅಕ್ರಮ ಹೆಚ್ಚಾಗಿದೆ. ಕಬಳಿಕೆ ಕೇವಲ ಕಬಳಿಕೆದಾರರಿಂದಷ್ಟೇ ಆಗಿಲ್ಲ, ಸರ್ಕಾರಿ ಅಧಿಕಾರಿಗಳು ಇದಕ್ಕೆ ನೆರವು ನೀಡಿದ್ದಾರ ಅಲ್ವೇನ್ರೀ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದರು. ಇಲಾಖೆ ಅಧಿಕಾರಿಗಳು ಮೌನ ವಹಿಸಿದಾಗ, ಮಾತಾಡ್ರೀ ನೀವು ಎಂದು ಹೇಳಿದರು. ಭೂ ಕಬಳಿಕೆದಾರರು ಹಣದಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಭೂ ಕಬಳಿಕೆ ಮಾಡಿ ದುಡ್ಡು ಮಾಡಿದವರು ಏನನ್ನು ಬೇಕಾದರೂ ಖರೀದಿ ಮಾಡಬಹುದು ಎಂದುಕೊಂಡಿದ್ದಾರೆ. ಸಚಿವರನ್ನು, ಮುಖ್ಯಮಂತ್ರಿಯನ್ನು ಕೊಂಡುಕೊಳ್ಳಬಹುದು, ನ್ಯಾಯಾಧೀಶರನ್ನು ಬೇಕಾದರೂ ಕೊಂಡುಕೊಳ್ಳಬಹುದು ಎಂದುಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿದರು.

ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಬೇಕು, ಕೆಲವರು ವಿಶೇಷ ಕೋರ್ಟ್ ಸ್ಥಾಪನೆಯಾಗದಂತೆ ತಡೆಯುವ ಯತ್ನ ಮಾಡಿದ್ದರು. ಅವರಿಗೆಲ್ಲ ಈಗ ನಡುಕ ಶುರುವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.  ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ನಗರ ಜಿಲ್ಲಾಧಿಕಾರಿ ವಿ.ಶಂಕರ್, ಅಧಿಕಾರಿಗಳಾದ ಎಂ.ವೈ.ಜಯಂತಿ, ರಮಣರೆಡ್ಡಿ, ಎಚ್.ಕೆ.ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin