ಹಣ ಕದ್ದಳೆಂದು ಬೆಂಕಿ ಹಚ್ಚಿ ಗರ್ಭಿಣಿ ಕೊಲೆ
ಈ ಸುದ್ದಿಯನ್ನು ಶೇರ್ ಮಾಡಿ
ಕಲಬುರಗಿ,ಸೆ.11-ಹಣ ಕದ್ದಳೆಂದು ಪತಿ ಮತ್ತು ಆಕೆಯ ಅತ್ತೆ ಬೆಂಕಿ ಹಚ್ಚಿದ್ದ ಪರಿಣಾಮ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಇಂದು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಪೂಜಾ ಸಾವನ್ನಪ್ಪಿರುವ ಗರ್ಭಿಣಿಯಾಗಿದ್ದು , ಸೆ.6ರಂದು ಮನೆಯಲ್ಲಿ 2000 ರೂ. ಕದ್ದಳೆಂದು ಆರೋಪಿಸಿ ಪತಿ ತಾರಾಸಿಂಗ್ ಚೌಹಾಣ್ ಹಾಗೂ ಅತ್ತೆ ಗೋಮಲು ಬಾಯಿ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದರು. ಗಂಭೀರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಪೂಜಾಳನ್ನು ಅಕ್ಕಪಕ್ಕದವರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಪೂಜಾ ಮೃತಪಟ್ಟಿದ್ದಾರೆ.
ಈ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು , ಗಂಡ ಹಾಗೂ ಅತ್ತೆ ತಲೆ ಮರೆಸಿಕೊಂಡಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಪೊಲೀಸರು ತಲೆಮರೆಸಿಕೊಂಡಿರುವ ಪತಿ ತಾರಾಸಿಂಗ್ ಹಾಗೂ ಆತನ ತಾಯಿಗಾಗಿ ಶೋಧ ನಡೆಸುತ್ತಿದ್ದಾರೆ.
Facebook Comments