ಹಣ ಪಡೆಯಲು ಇಂದೂ ಕೂಡ ಮುಂದುವರೆದ ಜನರ ಪರದಾಟ

ಈ ಸುದ್ದಿಯನ್ನು ಶೇರ್ ಮಾಡಿ

peples-q

ಬೆಂಗಳೂರು, ನ.15- ನೋಟು ನಿಷೇಧದ ಹಿನ್ನೆಲೆಯಲ್ಲಿ ಹೊಸ ನೋಟುಗಳನ್ನು ಪಡೆಯಲು ಬ್ಯಾಂಕ್, ಎಟಿಎಂಗಳ ಮುಂದೆ ಇಂದೂ ಕೂಡ ಮುಂಜಾನೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು.  ತಮ್ಮ ಕೆಲಸ-ಕಾರ್ಯಗಳನ್ನು ಬದಿಗೊತ್ತಿ ಗಾರ್ಮೆಂಟ್ಸ್ ನೌಕರರು, ಕಾರ್ಮಿಕರು, ಕೃಷಿಕರು, ವೃದ್ಧರು, ಮಹಿಳೆಯರು,  ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳು ಸೇರಿದಂತೆ ಬಹುತೇಕರು ಹಣ ಪಡೆಯಲು ಎಟಿಎಂಗಳ ಮುಂದೆ ಸಾಲುಗಟ್ಟಿದ್ದ ದೃಶ್ಯ ಇಂದು ಕೂಡ ಕಂಡುಬಂತು. 500, 1000ರೂ. ನೋಟುಗಳನ್ನು ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಹಣ ಬದಲಾವಣೆ ಮಾಡಿಕೊಳ್ಳಲು ಮತ್ತು ಬ್ಯಾಂಕ್‍ನಲ್ಲಿರುವ ಹಣವನ್ನು ವಿತ್‍ಡ್ರಾ ಮಾಡಿಕೊಳ್ಳಲು ಮತ್ತು ತಮ್ಮಲ್ಲಿರುವ ಹಣವನ್ನು ಬ್ಯಾಂಕ್‍ಗೆ ಕಟ್ಟಲು ಪರದಾಟ ಮುಂದುವರಿದಿದ್ದರೆ, ಬೆಳಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಕೆಲಸ ಮಾಡುತ್ತಿರುವ ಬ್ಯಾಂಕ್ ಸಿಬ್ಬಂದಿ ಹೈರಾಣಾಗಿದ್ದಾರೆ. ಬ್ಯಾಂಕ್ ಓಪನ್ ಆಗುವ ಮುಂಚೆಯೇ ಬ್ಯಾಂಕ್, ಎಟಿಎಂಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದ ದೃಶ್ಯ ಎಲ್ಲೆಲ್ಲೂ ಕಂಡುಬಂತು. ಸುಗಮ ನೋಟು ಚಲಾವಣೆಗೆ ಕೇಂದ್ರ ಸರ್ಕಾರ ಮತ್ತಷ್ಟು ಕ್ರಮ ಕೈಗೊಂಡಿದ್ದು, ನಗದಿಗಾಗಿ ಟಾಸ್ಕ್ ಪೋರ್ಸ್  ರಚನೆ ಮಾಡಿದೆ. ಅಂಚೆ ಕಚೇರಿ ಬ್ಯಾಂಕ್‍ಗಳು, ಎಟಿಎಂಗಳಿಗೆ ಹೆಚ್ಚಿನ ಹಣ ಕೂಡ ರವಾನೆ ಮಾಡಿದೆ. ಆದರೂ ಜನರಿಗೆ ಅಗತ್ಯವಾದ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹಣ ಬದಲಾವಣೆ ಹಾಗೂ ಎಟಿಎಂನಿಂದ ಪಡೆಯುವ ಹಣದ ಮೊತ್ತವನ್ನು ಹೆಚ್ಚಿಸಲಾಗಿದೆ. ದಿನವೊಂದಕ್ಕೆ 4500ರೂ. ಹಣ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಿರುವುದರಿಂದ ಬಹುತೇಕ ಜನ ಹಣ ಬದಲಾವಣೆಯತ್ತ ಮುಗಿ ಬಿದ್ದಿದ್ದಾರೆ. ಇತ್ತೀಚೆಗೆ ಸೆಕ್ಯೂರಿಟಿ ಗಾರ್ಡ್, ಗಾರ್ಮೆಂಟ್ಸ್, ಸಣ್ಣ ಸಣ್ಣ ಕೈಗಾರಿಕೆಗಳ ನೌಕರರು ಸೇರಿದಂತೆ ಎಲ್ಲರಿಗೂ ಬ್ಯಾಂಕ್ ಮೂಲಕವೇ ವೇತನ ನೀಡಲಾಗುತ್ತಿತ್ತು. ಬಹುತೇಕ ಎಲ್ಲರೂ ಎಟಿಎಂ ಕಾರ್ಡ್ ಹೊಂದಿದವರೇ ಆಗಿದ್ದಾರೆ. ಹಾಗಾಗಿ ತಮ್ಮ ಅಗತ್ಯಕ್ಕೆ ಬೇಕಾದ ಹಣ ಪಡೆಯಲು ಎಟಿಎಂ ಮುಂದೆ ಜಮಾಯಿಸಿದ್ದಾರೆ.
ದಿನೇ ದಿನೇ ಈ ಪ್ರಮಾಣ ಕುಗ್ಗಬೇಕು. ಆದರೆ, ಪ್ರತಿದಿನ ಹಣ ಪಡೆಯುವವರ ಪರದಾಟ ಹೆಚ್ಚಾಗುತ್ಲತೇ ಇದೆ. ಕೇಂದ್ರ ಸರ್ಕಾರದವರು ಕೂಡಲೇ 100, 500, 50ರೂ. ಮುಖಬೆಲೆಯ ನೋಟುಗಳನ್ನು ಜನರಿಗೆ ತಲುಪುವಂತೆ ಮಾಡಬೇಕು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin