ಹಣ ವಿತ್ ಡ್ರಾ ಮಿತಿ ಹೆಚ್ಚಿಸಿದ ಆರ್ಬಿಐ : ತಿಂಗಳಿಗೆ 3 ಬಾರಿ ಮಾತ್ರ ಉಚಿತ ಎಟಿಎಂ ಬಳಕೆ

ಈ ಸುದ್ದಿಯನ್ನು ಶೇರ್ ಮಾಡಿ

atm

ನವದೆಹಲಿ.ಜ.16 : ನಿತ್ಯದ ಎಟಿಎಂ ವಿತ್ ಡ್ರಾ ಮಿತಿಯನ್ನ 4,500 ರೂ.ನಿಂದ 10,000 ರೂ.ಗೆ ಏರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಣೆ ಹೊರಡಿಸಿದೆ. ವಾರದ ಬ್ಯಾಂಕ್ ವಿತ್ ಡ್ರಾ ಮಿತಿ 24 ಸಾವಿರದಲ್ಲೇ ಇದ್ದು, ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇನ್ನೂ, ಕರೇಂಟ್ ಅಕೌಂಟ್ ಹೊಂದಿರುವವರ ವಾರದ ಎಟಿಎಂ ವಿತ್ ಡ್ರಾ ಮಿತಿಯನ್ನ 50 ಸಾವಿರದಿಂದ 1 ಲಕ್ಷ ರೂಪಾಯಿಗೆ ಏರಿಸಲಾಗಿದೆ.  ನೋಟ್ ಬ್ಯಾನ್ ಮಾಡಿದ ಬಳಿಕ, ಮೊದಲಿಗೆ 2000 ರೂ. ಬಳಿಕ 2500 ರೂ. ನಂತರದಲ್ಲಿ 4500 ರೂ.ಗೆ ಏರಿಕೆ ಮಾಡಲಾಗಿತ್ತು. ಈಗ ದಿನಕ್ಕೆ 10,000 ರೂ. ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿ ಕರೆಂಟ್ ಅಕೌಂಟ್ ನಿಂದಲೂ ಹಣ ಪಡೆಯುವ ಮಿತಿಯನ್ನು ಏರಿಕೆ ಮಾಡಲಾಗಿದ್ದು, 50,000 ರೂ. ನಿಂದ 1,00,000 ರೂ.ಗೆ ಏರಿಕೆ ಮಾಡಲಾಗಿದೆ.

3 ಬಾರಿ ಮಾತ್ರ ಹಣ ಡ್ರಾ ಮಾಡಲು ಅವಕಾಶ : 

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದ್ದ ಸೌಲಭ್ಯಕ್ಕೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ಚಿಂತಿಸಿದ್ದು, ಎಟಿಎಂಗಳಲ್ಲಿ ಈವರೆಗೆ ಇದ್ದ 5 ಬಾರಿ ಉಚಿತ ವ್ಯವಹಾರವನ್ನು 3 ಬಾರಿಯಾಗಿ ಇಳಿಸಬೇಕು ಎಂದು ಬ್ಯಾಂಕ್ಗಳು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವನ್ನಿರಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.  ಈಗಿರುವ ನಿಯಮದ ಪ್ರಕಾರ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತ ವ್ಯವಹಾರ ಹಾಗೂ ಇತರ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 3 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದೆ. ಆನಂತರ ಪ್ರತಿ ವಹಿವಾಟಿಗೂ ರೂ.20 ಶುಲ್ಕ ವಿಧಿಸಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

:

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin