ಹಣ ವಿನಿಮಯದಲ್ಲಿ ಸಡಿಲಿಕೆ : ಇಂದಿನಿಂದ ಎಟಿಎಂಗಳಲ್ಲಿ ಸಿಗಲಿದೆ 2500 ರೂ.

ಈ ಸುದ್ದಿಯನ್ನು ಶೇರ್ ಮಾಡಿ

ATM-01

ನವದೆಹಲಿ ನ. 14 : 500 ಮತ್ತು 1000 ರೂ ರದ್ದತಿ ಹಿನ್ನೆಲೆಯಲ್ಲಿ ನೋಟಿಗಾಗಿ ಸಾರ್ವಜನಿಕರ ಕಷ್ಟ ಅರಿತ ಕೇಂದ ಸರ್ಕಾರ , ಎಟಿಎಂ ಮತ್ತು ಬ್ಯಾಂಕ್ ಶಾಖೆಗಳಿಂದ ನಗದು ಹಿಂಪಡೆಯಲು ವಿಧಿಸಿದ್ದ ಮಿತಿಯನ್ನು ಕೇಂದ್ರ ಭಾನುವಾರ ರಾತ್ರಿಯಿಂದ ಸಡಿಲಿಸಿದೆ. ನೋಟು ರದ್ದತಿಯ ಪರಿಣಾಮ ವಿತ್’ಡ್ರಾ ಹಾಗೂ 500 ಮತ್ತು 1 ಸಾವಿರ ಹಳೆಯ ನೋಟುಗಳು ಠೇವಣಿಯಿಟ್ಟಿದ್ದು, ಒಟ್ಟು 21 ಕೋಟಿಯಷ್ಟು ವಹಿವಾಟು ನಡೆದಿದೆ. ಮಾಡಿಕೊಳ್ಳುವ ಮಿತಿಯನ್ನು ಕೇಂದ್ರ ಸರ್ಕಾರ ನಿನ್ನೆ ರಾತ್ರಿಯಿಂದ ಸಡಿಲಗೊಳಿಸಿದ್ದು.ದಿನವೊಂದಕ್ಕೆ 2000 ದಿಂದ 2.500, ವಾರಕ್ಕೆ 20 ಸಾವಿರದಿಂದ 24 ಸಾವಿರಕ್ಕೆ ಏರಿಸಲಾಗಿದೆ. ಹಾಗೂ ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ದಿನವೊಂದಕ್ಕೆ 4 ಸಾವಿರದಿಂದ 4,500ಕ್ಕೆ ಹೆಚ್ಚಿಸಲಾಗಿದೆ. ಕಳೆದ 4 ದಿನದಿಂದ ದೇಶದಾದ್ಯಂತವಿರುವ ಬ್ಯಾಂಕುಗಳಿಗೆ ಸಾರ್ವಜನಿಕರು 3 ಲಕ್ಷ ಕೋಟಿ ರೂ. 500 ಮತ್ತು 1 ಸಾವಿರ ಹಳೆಯ ನೋಟುಗಳು ಠೇವಣಿಯಿಟ್ಟಿದ್ದು, ಒಟ್ಟು 21 ಕೋಟಿಯಷ್ಟು ವಹಿವಾಟು ನಡೆದಿದೆ.
ಈ ನಡುವೆ ಜನರಿಗೆ ಅಭಯ ನೀಡಿರುವ RBI, ‘ಬ್ಯಾಂಕ್ ಗಳಲ್ಲಿ ಸಾಕಷ್ಟು ನಗದು ಸಂಗ್ರಹ ಇರುವುದರಿಂದ ಗ್ರಾಹಕರು ಆತಂಕಪಡಬೇಕಾಗಿಲ್ಲ ಎಂದು ಮನವಿ ಮಾಡಿದೆ. ಕೈಯಲ್ಲಿ ನಗದು ಇಲ್ಲದೆ ಪರದಾಡುತ್ತಿದ್ದ ಜನ ನಿನ್ನೆಯೂ ಎಟಿಎಂ ಮತ್ತು ಬ್ಯಾಂಕ್ ಶಾಖೆಗಳ ಮುಂದೆ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೈಯಲ್ಲಿ ನಗದು ಇಲ್ಲದೆ ಕಷ್ಟ ಅನುಭವಿಸಿದ್ದ ಜನ ಕೆಲವು ಎಟಿಎಂಗಳಿಂದ ಹಣ ಪಡೆದು ನಿಟ್ಟುಸಿರು ಬಿಟ್ಟರು.

► Follow us on –  Facebook / Twitter  / Google+

Facebook Comments

Sri Raghav

Admin