ಹಣ ಹಂಚುವ ನಾಯಕರಿಗೆ ತಕ್ಕ ಪಾಠ ಕಲಿಸಿ

ಈ ಸುದ್ದಿಯನ್ನು ಶೇರ್ ಮಾಡಿ

voting

ಕುಣಿಗಲ್, ಆ.30-ಚುನಾವಣಾ ಸಂದರ್ಭದಲ್ಲಿ ಹಣ ಹಂಚಿ ಮತದಾರರ ಸೆಳೆಯುವ ಮುಖಂಡರ ಬಗ್ಗೆ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಗಣೇಶ್ ಸಲಹೆ ನೀಡಿದ್ದಾರೆ.  ಪಟ್ಟಣದ ಕೋಟೆ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಬಿಜೆಪಿ ಮಂಡಳ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಬೆಂಗಳೂರಿನಿಂದ ಹಣ ತಂದು ಚುನಾವಣೆಯಲ್ಲಿ ಸ್ಪರ್ಧಿಸಿ ಮಾಡಿ ಪ್ರಾಮಾಣಿಕ ಚುನಾವಣೆಯ ವಾತಾವರಣವನ್ನು ಕಲುಷಿತಗೊಳಿಸಿ, ನಂತರ ಪಲಾಯನ ಮಾಡುತ್ತಿದ್ದಾರೆ.

ಆದ್ದರಿಂದ ಕ್ಷೇತ್ರದಲ್ಲಿ ಜನತೆಯ ಮಧ್ಯೆ ಉಳಿದುಕೊಂಡು ದಿನದ 24 ಗಂಟೆ ಸೇವೆ ಸಲ್ಲಿಸುವ ಮುಖಂಡರನ್ನು ಆರಿಸಿ ಕಳುಹಿಸುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ. ಆದ್ದರಿಂದ ಎರಡು ಬಾರಿ ಸೋಲನ್ನನುಭವಿಸಿ ಧೃತಿಗೆಡದೆ ಜನರ ಮಧ್ಯೆ ಉಳಿದುಕೊಂಡಿರುವ ಡಿ.ಕೃಷ್ಣಕುಮಾರ್ ಅವರನ್ನು ಈ ಬಾರಿ ಶತಾಯಗತಾಯ ಗೆಲ್ಲಿಸಲು ಕಾರ್ಯಕ್ರಮಗಳನ್ನು ರೂಪಿಸುವ ಜೊತೆಗೆ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳಬೇಕೆಂದು ತಿಳಿಸಿದರು.ತಾಲೂಕು ಅಧ್ಯಕ್ಷ ಬಿ.ಕೃಷ್ಣಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಕಳೆದ 3 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಸಂಸದರು ಮತ್ತು ಶಾಸಕರು ಸರ್ಕಾರದಿಂದ ಯಾವುದೇ ಅನುದಾನ ತಂದಿದ್ದರೆ ಅದನ್ನು ದಾಖಲೆ ಸಮೇತ ಬಹಿರಂಗಪಡಿಸಿಲ್ಲ.

ಸಂಸದರು ಮತ್ತು ಶಾಸಕರು ಕ್ಷೇತ್ರದ ಜನತೆಯ ದಿಕ್ಕುತಪ್ಪಿಸುವ ಯತ್ನ ನಡೆಸುತ್ತಿದ್ದಾರೆ. ತಾಲೂಕು ಪಂಚಾಯ್ತಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯೊಬ್ಬರನ್ನು ಛೂ ಬಿಟ್ಟು ಬಿಜೆಪಿ ಸದಸ್ಯರ ಮೇಲೆ ಜಾತಿ ನಿಂದನೆ ಪ್ರಕರಣವನ್ನು ಹೂಡಲು ತಾಪಂ ಅಧ್ಯಕ್ಷರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹೇಳಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ಮಾಜಿ ಬಿಜೆಪಿ ಮುಖಂಡರಾದ ಪುಟ್ಟರಾಮಯ್ಯ, ನಾರಾಯಣಗೌಡ ಮುಂತಾದವರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin