ಹತ್ಯೆಯಾದ ಜೆಡಿಎಸ್ ಕಾರ್ಯಕರ್ತನ ಮನೆಗೆ ಕುಮಾರಸ್ವಾಮಿ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Murder-01

ಮಳವಳ್ಳಿ,ಡಿ.25- ನಡು ದಾರಿಯಲ್ಲಿ ಹತ್ಯೆಯಾದ ಜೆಡಿಎಸ್ ಕಾರ್ಯಕರ್ತನ ಮನೆಗೆ ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.   ಹಲಗೂರು ಬಳಿ ನಿನ್ನೆ ಹತ್ಯೆಯಾಗಿದ್ದ ಜೆಡಿಎಸ್ ಕಾರ್ಯಕರ್ತ ಕೆಬಲ್ ಕುಮಾರ್‍ನ ಸ್ವಗ್ರಾಮದವಾದ ಬೆನಮನಹಳ್ಳಿಯಲ್ಲಿರುವ ಅವರ ಮನೆಗೆ ಭೇಟಿ  ನೀಡಿದರು. ಇಂದು ಕುಮಾರ ಅಂತ್ಯಕ್ರಿಯೆಗೂ ಮುನ್ನ ಮೃತನ ಅಂತಿಮ ದರ್ಶನ ಪಡೆದರು.

ಜಮೀರ್ ವಿರುದ್ದ ಗರಂ:

ಕುಮಾರಸ್ವಾಮಿ ಯವ ರಿಗೆ ಹೇಳಿಯೇ ಅಡ್ಡ ಮತದಾನ ಮಾಡಿದ್ದಾಗಿ ಹೇಳಿಕೆ ನೀಡಿರುವ ಜಮೀರ್ ಅಹಮದ್ ಖಾನ್ ಬಗ್ಗೆ ಗರಂ ಆದ ಕುಮಾರಸ್ವಾಮಿಯವರು ಮುಖಕ್ಕೆ ಹೊಡೆದ ಹಾಗೆ ಅಡ್ಡ ಮತದಾನ ಮಾಡುವುದಾಗಿ ಹೇಳಿ ಅದೇ ರೀತಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗ ಆಣೆ, ಪ್ರಮಾಣ ಮಾಡಲು ಏನಿದೆ. ಅವರೆಲ್ಲ ತುಂಬ ದೊಡ್ಡವರು ಮತ್ತೆ ಪಕ್ಷಕ್ಕೆ ಬೇಡ ಎಂದು ನುಡಿದರು. ನಂಜನಗೂಡು ಉಪಚುನಾವಣೆಗಾಗಿ ಸರಳ, ಸಜ್ಜನಿಕೆಯ ವ್ಯಕ್ತಿಯೊಬ್ಬನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ತಿಂಗಳ ಹಿಂದೆಯೇ ಸ್ಪರ್ಧಿಸಲು ನಿರ್ಧಾರ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿನ್ನೆ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕುಮಾರ್‍ಗೆ ಕಣ್ಣಿಗೆ ಕಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಆತನ ಹತ್ಯೆಗೈದಿದ್ದರು. ಕುಮಾರ್ ಅಂತಿಮ ದರ್ಶನಕ್ಕೆ ಇಂದು ಬೆನಮನಹಳ್ಳಿಗೆ ಅವರು ಆಗಮಿಸಿದ್ದರು. ಈ ಸಂಬಂಧ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin