ಹನಿ ಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಸಂಸದ : 5 ರೂ. ಕೋಟಿ ನೀಡುವಂತೆ ಬ್ಲಾಕ್‍ಮೇಲ್

ಈ ಸುದ್ದಿಯನ್ನು ಶೇರ್ ಮಾಡಿ

Honey-Trap

ನವದೆಹಲಿ, ಮೇ 1– ಹನಿ ಟ್ರ್ಯಾಪ್‍ಗೆ(ಮೋಹದ ಬಲೆ) ರಾಜಧಾನಿ ದೆಹಲಿಯ ಲೋಕಸಭಾ ಸದಸ್ಯರೊಬ್ಬರು ಸಿಲುಕಿರುವ ಪ್ರಕರಣ ಇದೀಗೆ ರಾಜಕೀಯ ವಲಯ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ದುಷ್ಕರ್ಮಿಗಳ ಗುಂಪೊಂದು ತಮ್ಮನ್ನು ಈ ಜಾಲಕ್ಕೆ ಎಳೆದು, ಕೆಲವು ಆಕ್ಷೇಪರ್ಹಾ ದೃಶ್ಯಗಳನ್ನು ಚಿತ್ರಿಸಿ 5 ಕೋಟಿ ರೂ.ಗಳಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ ಎಂದು ಸಂಸದರು ನೀಡಿದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇದೀಗ ಅತ್ಯಂತ ಪ್ರಭಾವಿ ಮಹಿಳೆ ಸೇರಿದಂತೆ ಹನಿಟ್ರ್ಯಾಪ್ ಗ್ಯಾಂಗ್‍ಗಾಗಿ ಮಾನವ ಬೇಟೆ ಆರಂಭಿಸಿದ್ದಾರೆ. ಈ ಖತರ್ನಾಕ್ ಗ್ಯಾಂಗ್ ಲೀಡರ್ ಆಗ ಮಹಿಳೆ ಬಂಧನಕ್ಕಾಗಿ ವ್ಯಾಪಕ ಬಲೆ ಬೀಸಲಾಗಿದೆ.ತಾವು ಕೇಳಿರುವ 5 ಕೋಟಿ ರೂ.ಗಳನ್ನು ನೀಡದಿದ್ದರೆ ದೃಶ್ಯಗಳು ಮತ್ತು ವೀಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಈ ಗ್ಯಾಂಗ್ ಸಂಸದರಿಗೆ ಬೆದರಿಕೆ ಹಾಕಿದೆ. ಅಲ್ಲದೇ ಎಂಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿಯೂ ಆ ಮಹಿಳೆ ಧಮಕಿ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.   ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 384 (ಬಲತ್ಕಾರದ ಸುಲಿಗೆ) ಅಡಿ ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂಬುದನ್ನು ದೆಹಲಿಯ ವಿಶೇಷ ಪೊಲೀಸ್ ಕಮಿಷನರ್ ಮುಖೇಶ್ ಮೀನಾ ಖಚಿತಪಡಿಸಿದ್ದಾರೆ. ಈ ಹನಿ ಟ್ರ್ಯಾಪ್ ಪ್ರಕರಣವನ್ನು ಪೊಲೀಸರು ಆದ್ಯತೆಯಾಗಿ ಪರಿಗಣಿಸಿದ್ದು ಲೇಡಿ ಮತ್ತು ಆಕೆಯ ಗ್ಯಾಂಗ್‍ನನ್ನು ಶೀಘ್ರ ಬಂಧಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಅಗತ್ಯವಿದ್ದರೆ ಈ ಪ್ರಕರಣವನ್ನು ಕ್ರೈಂ ಬ್ರಾಂಚ್ ಅಥವಾ ವಿಶೇಷ ಘಟಕಕ್ಕೆ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಂಪಿ ನೀಡಿದ ದೂರಿನಲ್ಲಿ ಏನಿದೆ ?

ಮಹಿಳೆಯೊಬ್ಬಳು ನನ್ನಿಂದ ಸಹಾಯ ಕೇಳಿದಳು ಹಾಗೂ ಘಾಜಿಯಾಬಾದ್‍ನಲ್ಲಿರುವ ತನ್ನ ಮನೆಗೆ ಬರುವಂತೆ ಕೋರಿದಳು. ನಾನು ಆಕೆಯ ಮನೆಗೆ ಹೋದಾಗ ಮತ್ತು ಬರಿಸುವ ಪಾನೀಯ ನೀಡಿದಳು. ನಾನು ಪ್ರಜ್ಞಾಶೂನ್ಯನಾದೆ. ಆನಂತರ ನಾನು ಈ ಬಲೆಗೆ ಬಿದ್ದಿರುವುದು ನನ್ನ ಅರಿವಿಗೆ ಬಂತು. ನಂತರ ಆ ಮಹಿಳೆ ಮತ್ತು ಗ್ಯಾಂಗ್ ನನಗೆ 5 ಕೋಟಿ ರೂ.ಗಳನ್ನು ನೀಡುವಂತೆ ಬ್ಲಾಕ್ ಮೇಲೆ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಅಶ್ಲೀಲ ದೃಶ್ಯಗಳನ್ನು ಬಿಡುಗಡೆ ಮಾಡುವುದಾಗಿ ಮತ್ತು ಅತ್ಯಾಚಾರ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಸದರು ದೂರು ನೀಡಿದ್ಧಾರೆ.

ಆರಂಭಿಕ ವರದಿಗಳ ಪ್ರಕಾರ ಈ ಪ್ರಭಾವಿ ಮಹಿಳೆ ವ್ಯವಸ್ಥಿತ ಜಾಲವೊಂದನ್ನು ಹೊಂದಿದ್ದು ಬ್ಲಾಕ್‍ಮೇಲ್ ಮಾಡುವ ದಂಧೆಯಲ್ಲಿ ತೊಡಗಿದ್ದಾಳೆ. ಇದಕ್ಕಾಗಿ ತನ್ನದೇ ಆದ ಗ್ಯಾಂಗ್‍ವೊಂದನ್ನು ಕಟ್ಟಿಕೊಂಡಿದ್ದಾಳೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಸಂಸದರು ಮತ್ತು ರಾಜಕಾರಣಿಗಳಿಂದ ನೆರವು ಕೋರುವ ನೆಪದಲ್ಲಿ ಅವರನ್ನು ಸಂಪರ್ಕಿಸಿ ಬಲೆಗೆ ಕೆಡವಿಕೊಳ್ಳುವುದು ಈ ಗ್ಯಾಂಗ್‍ನ ಕಾರ್ಯವಿಧಾನವಾಗಿದೆ. ಮನೆಗೆ ಅಹ್ವಾನಿಸಿ ಚಹಾ ಅಥವಾ ತಂಪು ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ನೀಡಿ ಪ್ರಜ್ಞೆ ತಪ್ಪಿಸಿ ಆಕ್ಷೇಪರ್ಹಾ ಭಂಗಿಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದು ಬ್ಲಾಕ್ ಮೇಲ್ ಮಾಡುತ್ತಾರೆ. ಈ ಬಗ್ಗೆ ಕೆಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಸುಂದರಿಯನ್ನು ಮುಂದಿಟ್ಟುಕೊಂಡು ರಾಜಕಾರಣಗಳು, ಪ್ರಭಾವಿಗಳು ಮತ್ತು ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ನಗ-ನಾಣ್ಯ ದೋಚುವ ಸುಲಭ ಮಾರ್ಗವೆಂದರೆ ಹನಿ ಟ್ರ್ಯಾಪ್ !  ಹನಿಟ್ರ್ಯಾಪ್-ದುಷ್ಕರ್ಮಿಗಳಿಗೆ ಹಣಗಳಿಸುವ ಸುಲಭ ದಾರಿ. ಇಂಥ ಪ್ರಕರಣಗಳು ಮರುಕಳುಹಿಸುತ್ತಿರುವಾಗಲೇ ಲೋಕಸಭಾ ಸದಸ್ಯರೊಬ್ಬರೂ ಈ ಬಲೆಗೆ ಬಿದ್ದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin