ಹಬ್ಬಗಳು ಜೀವನ ನಡೆಸುವ ಮಾರ್ಗತೋರುತ್ತೇವೆ : ಅಡ್ನೂರ ಶ್ರೀಗಳು

ಈ ಸುದ್ದಿಯನ್ನು ಶೇರ್ ಮಾಡಿ

12
ಗದಗ,ಅ.1- ವಿವಿಧತೆಯಲ್ಲಿಏಕತೆ ಸಾಧಿಸಿ ತೋರಿಸುವ ಶ್ರೇಷ್ಠತೆ ನಮ್ಮ ಭಾರತೀಯ ಹಬ್ಬಗಳ ಪರಂಪರೆಯಲ್ಲಿಇದೆ. ಇತರರ ಸಂತೋಷದಲ್ಲಿ ನಮ್ಮ ಪರಂಪರೆಯ ಸಂಸ್ಕೃತಿ  ಇರುವುದನ್ನುಧರ್ಮ ಸಿದ್ಧಾಂತಗಳು ಯಾವಾಗಲೂ ಬೋಧಿಸಿಕೊಂಡು ಬಂದಿವೆ. ಮತ್ತು ಹಬ್ಬಗಳು ಜೀವನ ನಡೆಸುವ ಮಾರ್ಗವನ್ನುತೋರಿಸುತ್ತವೆಎಂದು ಷ.ಬ್ರ. ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.ಅವರುಜಗದ್ಗುರು ಪಂಚಾಚಾರ್ಯ ಸೇವಾ ಸಂಘ ಆಯೋಜಿದ್ದಅಮೃತವಾಹಿನಿ-31 ಕಾರ್ಯಕ್ರಮ ಸಾನಿಧ್ಯವಹಿಸಿ ಮಾತನಾಡಿದರು.ಈ ನವರಾತ್ರಿ ಸಂದರ್ಭದಲ್ಲಿದುರ್ಗಮಾತೆಯ ಪುರಾಣವನ್ನುಓದುತ್ತೇವೆಅಥವಾ ಕೇಳುತ್ತವೆ ಅದರಲ್ಲಿರಾಕ್ಷಸರನ್ನು ಸಂಹರಿಸಿದಳು ಎಂದು ತಿಳಿದುಬರುತ್ತದೆ.ಇದರಅರ್ಥ ನಮ್ಮಲ್ಲಿಇರುವ ರಾಕ್ಷಸಿ ಗುಣಗಳನ್ನು ಸಂಹರಿಸಿಕೊಳ್ಳಬೇಕು ಮತ್ತೊಬ್ಬರಿಗೆತೊಂದರೆಆಗದಹಾಗೆ ಬದುಕುಬೇಕು.ಸೌಹಾರ್ದ, ಶಾಂತಿ, ಸಹನೆ, ಅಂತಹ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಬೇಕು.ಅದನ್ನುಎಲ್ಲ ಹಬ್ಬಗಳು ಸಾರಿ ಸಾರಿ ಹೇಳುತ್ತವೆ. ಅದೇ ಹಬ್ಬಗಳ ತಾತ್ಪರ್ಯಎಂದರು.
ನವರಾತ್ರಿಯಲ್ಲಿ ಶಕ್ತಿಯಆರಾಧನೆ ಎಂಬ ವಿಷಯದ ಮೇಲೆ ವೇ.ಮೂ.ಶಶಿಧರ ಶಾಸ್ತ್ರಿ ಹಿರೇಮಠ ಮಾತನಾಡುತ್ತ ಸರ್ವಶಕ್ತಿ ಸ್ವರೂಪಳಾದ ಶಕ್ತಿದೇವತೆಯನ್ನುಯಾವಾಗಾಲೂಧ್ಯಾನಿ ಸುತ್ತಿದ್ದರೆ ಅಸುರರಿಂದ ಆಪತ್ತು ಬಂದಾಗ ಅದನ್ನು ಪರಿಹರಿಸುವಳು ದುರ್ಗಾಮಾತೆ. ಶಕ್ತಿಮಾತೆರಾಕ್ಷಸರಾದ ಶುಂಭ-ನಿಶುಂಭ, ಚಂಡು-ಮುಂಡರ, ರಕ್ತಬೀಜಾಸುರ, ಮಹಿಷಾಸುರ, ಮೊದಲಾದಅಸುರರನ್ನು ಶಕ್ತಿಮಾತೆ ಸಂಹರಿಸಿದ್ದಾಳೆ.ಇದನ್ನು ನಾವು ನಮ್ಮ ಇಂದಿನ ಜೀವನಕ್ಕೆ ಹೋಲಿಸಿ ಹೇಳುವುದಾದರೆ ನಮ್ಮಲ್ಲಿರುವಅರ್ಷಷಡ್ವರ್ಗಗಳೇ ಅಸುರರು, ಮೋಹ, ಕ್ರೋಧ, ಕಾಮ, ಮದ, ಮತ್ಸರ ಇವುಗಳನ್ನು ಹೋಗಲಾಡಿಸಬೇಕು.ಜ್ಞಾನಕ್ಕಿಂತಅಜ್ಞಾನವನ್ನುಆರಾಧಿಸುತ್ತವೆಅಥವಾಅದಕ್ಕೆ ನಾವು ಬೇಗ ಮರುಳಾಗುತ್ತೇವೆ. ಅದೇ ಮನುಷ್ಯನ ಕಷ್ಟಗಳಿಗೆ ಕಾರಣವಾಗುತ್ತದೆಎಂದುಉಪನ್ಯಾಸ ನೀಡಿದರು.
ನಗರದ ಹಿರಿಯ ವೈದ್ಯರಾದಡಾ|| ಅನಂತ ಶಿವಪೂರ ಷಷ್ಠಪೂರ್ತಿ ಹೊಂದಿದ ಹಿನ್ನಲೆಯಲ್ಲಿದಂಪತಿಯನ್ನು ಸತ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುವರ್ಣ ಹೊಸಂಗಡಿ,ಅಧ್ಯಕ್ಷ ಬಸಣ್ಣ ಮಲ್ಲಾಡದ,ಉಪಾಧ್ಯಕ್ಷಚಂದ್ರು ಬಾಳಿಹಳ್ಳಿಮಠ,ಪ್ರಧಾನ ಕಾರ್ಯದರ್ಶಿ ವಿ.ಕೆ.ಗುರುಮಠ,ಯುವಘಟಕದಅಧ್ಯಕ್ಷ ಅನಿಲ ಅಬ್ಬಿಗೇರಿ, ಮಹಿಳಾ ಘಟಕದಅಧ್ಯಕ್ಷೆ ಶಾರದಾ ಹಿರೇಮಠ, ಮಲ್ಲಿಕಾರ್ಜುನ ಶಿಗ್ಲಿ, ಪ್ರಕಾಶ ಬೇಲಿ, ಶಿವಾನಂದಯ್ಯ ಹಿರೇಮಠ, ಶಶಿಧರ ಹಿರೇವಡೆಯರ, ಮಲ್ಲಯ್ಯ ಮುತ್ತಿನಪೆಂಡಿಮಠ, ರಾಜುರೋಖಡೆ, ವಿರೇಶ ಕೂಗು, ಅಜ್ಜಣ್ಣ ಮುಧೋಳ, ವೀರಣ್ಣದನ್ನೂರಹಿರೇಮಠ ಕಾಶೀ ಪಾಠಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin