ಹಬ್ಬಮಾಡಿ ಬೆಂಗಳೂರಿಗೆ ವಾಪಸ್ಸಾದವರಿಗೆ ಟ್ರಾಫಿಕ್ ಜಾಮ್‍ನ ಕಿರಿಕಿರಿ

ಈ ಸುದ್ದಿಯನ್ನು ಶೇರ್ ಮಾಡಿ

Trffic

ಬೆಂಗಳೂರು, ಅ.13– ಸಾಲು ಸಾಲು ರಜೆ ಮುಗಿಸಿ ಇಂದು ಬೆಳಗ್ಗೆ ವಾಪಸ್ ಬಂದ ಜನರಿಗೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‍ನ ಸ್ವಾಗತ… ಎಲ್ಲೆಡೆ ಟ್ರಾಫಿಕ್ ಕಿರಿಕಿರಿ. ಮೈಸೂರು, ತುಮಕೂರು, ಹೊಸೂರು, ಕೆಆರ್ ಪುರ ಭಾಗಗಳಲ್ಲಿ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಖಾಸಗಿ ಬಸ್‍ಗಳು ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದ ಈ ಸಮಸ್ಯೆ ಶುರುವಾಗಿದ್ದು, ಟ್ರಾಫಿಕ್ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಪರದಾಡಿದರು.  ಯಶವಂತಪುರ, ಯಲಹಂಕ ಮುಂತಾದ ಬಸ್ ನಿಲ್ದಾಣಗಳಲ್ಲಿ ಭರ್ಜರಿ ವಾಹನಗಳ ಓಡಾಟವಿತ್ತು. ಕೆಂಪೇಗೌಡ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಆಟೋ, ಟ್ಯಾಕ್ಸಿಗಳಿಗಾಗಿ ಬಿಎಂಟಿಸಿ ಬಸ್ ಹಿಡಿಯಲು ಜನ ಪರದಾಡುತ್ತಿದ್ದರು.

ಬೆಂಗಳೂರಿನಲ್ಲಿ ತಡರಾತ್ರಿ ಮಳೆಯಾಗಿರುವುದು ಕೂಡ ಟ್ರಾಫಿಕ್ ಸಮಸ್ಯೆಆಗುವುದಕ್ಕೆ ಮತ್ತೊಂದು ಕಾರಣವಾಯಿತು. ಈ ಮಧ್ಯೆ ನಗರದ ಕಬ್ಬನ್‍ಪಾರ್ಕ್ ಸಂಚಾರಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.  ಒಂದೇ ದಿನದಲ್ಲಿ 165 ಕೇಸ್ ಬುಕ್ ಮಾಡಿ 65 ಸಾವಿರ ದಂಡ ವಸೂಲಿ ಮಾಡಿದ್ದಾರೆ. ಕುಡಿದು ವಾಹನ ಚಾಲನೆ ಸೇರಿದಂತೆ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರರ ಮೇಲೆ ಕಬ್ಬನ್‍ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin