ಹರಿಣಗಳನ್ನು ಚಂಡಾಡಿ 35ನೇ ಶತಕ ದಾಖಲಿಸಿದ ಕೊಹ್ಲಿ, ಭಾರತಕ್ಕೆ ಸರಣಿ ಜಯ

ಈ ಸುದ್ದಿಯನ್ನು ಶೇರ್ ಮಾಡಿ

virat

ಸೆಂಚೂರಿಯನ್ ಫೆ.16 : ಹರಿಣಗಳ ವಿರುದ್ಧ ಇಲ್ಲಿ ನಡೆದ ಅಂತಿಮ ಹಾಗೂ 6ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್’ಗಳ ಭರ್ಜರಿ ಜಯ ಗಳಿಸುವ ಮೂಲಕ 5-1 ಅಂತರದಲ್ಲಿ 6 ಪಂದ್ಯಗಳ ಸರಣಿಯನ್ನು ಗೆದ್ದು ಹರಿಣಗಳ ನಾಡಲ್ಲಿ ಐತಿಹಾಸಿಕ ದಾಖಲೆ ಬರೆದಿದೆ.  ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡವನ್ನು ಕೇವಲ 204 ರನ್’ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಭಾರದ ಬೌಲಿಂಗ್ ಎದುರು ಹರಿಣಗಳು ನರ್ ಗಳಿಸಲು ಪರದಾಡಿದರು. ನಂತರ ಸುಲಭ ಗುರಿಯನ್ನು ಬೆನ್ನತ್ತಿದ್ದ ಭಾರತ ನಾಯಕ ವಿರಾಟ್ ಕೊಹ್ಲಿಯ 35 ನೇ ಅದ್ಬುತ ಶತಕದ ಸಾಹಾಯದಿಂದ ಇನ್ನೂ 107 ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆಲುವಿನ ನಗೆ ಬೀರಿತು.
ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರಿದ ನಾಯಕ ವಿರಾಟ್  ಕೊಹ್ಲಿ(558 ರನ್) ಸರಣಿ ಶ್ರೇಷ್ಠ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಭಾರತದ ಪರ ನಾಯಕ ವಿರಾಟ್ ಕೊಹ್ಲಿ129 , ಅಜಿಂಕ್ಯ ರಹಾನೆಯ 34, ರೋಹಿತ್ ಶರ್ಮಾ 15 ಹಾಗೂ ಧವನ್ 18 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:
ದಕ್ಷಿಣ ಆಫ್ರಿಕಾ: 204/10
ಭಾರತ: 206/2

Facebook Comments

Sri Raghav

Admin