ಹರಿಯಾಣಾದ ಭೀವಾನಿ ಜಿಲ್ಲೆಯಲ್ಲಿ ರಸ್ತೆಭೀಕರ ಅಪಘಾತ : 9 ಯಾತ್ರಿಗಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

deadly--accident

ಭೀವಾನಿ, ಸೆ.30-ಹರ್ಯಾಣದ ಭೀವಾನಿ ಜಿಲ್ಲೆಯ ಸೈನಿವಾಸ್ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಭತ್ತು ಯಾತ್ರಾರ್ಥಿಗಳು ಮೃತಪಟ್ಟು, ಇತರ 14 ಮಂದಿ ತೀವ್ರ ಗಾಯಗೊಂಡಿದ್ದಾರೆ.  ಯಾತ್ರಿಗಳಿದ್ದ ಪಿಕ್-ಅಪ್ ವಾಹನವು ಟ್ರಕ್‍ಗೆ ಅಪ್ಪಳಿಸಿ, ಆನಂತರ ಮೊತ್ತೊಂದು ಲಾರಿಯು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ದುರಂತದಲ್ಲಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ರಾಜಸ್ತಾನದ ಹನುಮಾನ್‍ಗಡ್ ಜಿಲ್ಲೆಯ ಧಾರ್ಮಿಕ ಮಹತ್ವದ ಗೊಗಾಮೆಡಿಗೆ ಯಾತ್ರೆ ಕೈಗೊಂಡಿದ್ದ ಪಂಜಾಬ್‍ನ ಪ್ರಯಾಣಿಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿದ್ದಾ. ಈ ದುರ್ಘಟನೆ ನಡೆದಿದೆ.  14 ಮಂದಿ ಗಾಯಾಳುಗಳನ್ನು ಹತ್ತಿರ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನಿಯವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin