ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಮನೆ ಮೇಲೆ ಸಿಬಿಐ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Hoodadsdg

ನವದೆಹಲಿ, ಸೆ.3-ಕಳೆದ ವರ್ಷ ನೋಂದಣಿಯಾಗಿದ್ದ ಭೂ ಮಂಜೂರಾತಿ ಪ್ರಕರಣದ ಸಂಬಂಧ ಹರ್ಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ನಿವಾಸ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಇತರ 19 ಸ್ಥಳಗಳ ಮೇಲೆ ಇಂದು ಬೆಳಿಗ್ಗೆ ಕೇಂದ್ರೀಯ ತನಿಖಾದಳ-ಸಿಬಿಐ ದಾಳಿ ನಡೆಸಿದೆ. ಈ ದಾಳಿಯ ವೇಳೆ ಈ ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳು ಮತ್ತು ದಸ್ತಾವೇಜುಗಳ ವ್ಯಾಪಕ ಶೋಧ ನಡೆಸಿ ಪರಿಶೀಲಿಸಿದೆ.  ಭೂಮಿ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿರುವ ನ್ಯಾಯಮೂರ್ತಿ ಎಸ್.ಎನ್.ಧಿಂಗ್ರಾ ಆಯೋಗದ ವರದಿಯನ್ನು ಸಾರ್ವಜನಿಕರ ಮುಂದೆ ಬಹಿರಂಗಗೊಳಿಸಬೇಕು ಹಾಗೂ ಈ ಪ್ರಕರಣಗಳನ್ನು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ವೈಭವೀಕರಿಸಿದ್ದಾರೆ ಮತ್ತು ವಿನಾಕಾರಣ ಬಲಿ ಪಶು ಮಾಡುತ್ತಿದ್ದಾರೆ ಎಂದು ಹೂಡಾ ಕಳೆದ ಎರಡು ದಿನಗಳ ಹಿಂದಷ್ಟೇ ಟೀಕಿಸಿದ್ದರು.

ಅಕ್ರಮ ಭೂ ಮಂಜೂರಾತಿ ಪ್ರಕರಣವೊಂದರಲ್ಲಿ ಹಣ ದುರ್ಬಳಕೆ ತಡೆ ಕಾಯ್ದೆ (ಎಂಪಿಎಲ್ಎ) ಅಡಿ ಕಳೆದ ಜುಲೈನಲ್ಲಿ ಜರಿ ನಿರ್ದೇಶನಾಲಯ (ಇಡಿ) ಭೂಪಿಂದರ್ ಸಿಂಗ್ ಹೂಡಾ ಮತ್ತು ಅವರಿಂದ ಭೂಮಿ ಮಂಜೂರಾತಿ ಪಡೆದಿದ್ದ ಅಸೋಸಿಯೇಟ್ ಜರ್ನಲ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಿತ್ತು.   ಹೂಡಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಅಕ್ರಮವಾಗಿ ಪಂಚಕುಲದಲ್ಲಿ ಅಸೋಸಿಯೇಟೆಡ್ ಜರ್ನಲ್ ಲಿಮಿಟೆಡ್ಗೆ ಭೂಮಿಯನ್ನು ಮಂಜೂರು ಮಾಡಿದ್ದರು. ಈ ಭೂ ಮಂಜೂರಾತಿಗಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂಟರ ರೂಪಾಯಿಗಳಷ್ಟು ನಷ್ಟವಾಗಿತ್ತು.
ಹರ್ಯಾಣ ನಗರಾಭಿವೃದ್ಧಿ ಪ್ರಾಧಿಕಾರ (ಹೂಡಾ) ಅಧ್ಯಕ್ಷರಾಗಿದ್ದಾಗ ಕೈಗಾರಿಕೆ ಭೂಮಿಗಳ ಮಂಜೂರಾತಿಯಲ್ಲಿ ಭಾರಿ ಅವ್ಯವಹಾರಗಳನ್ನು ನಡೆಸಿರುವ ಆರೋಪಕ್ಕಾಗಿ ಅವರು ಈಗಾಗಲೇ ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.

496 ಚ.ಮೀ.ವಿಸ್ತೀರ್ಣದ 14 ಕೈಗಾರಿಕಾ ಭೂಮಿಗಳನ್ನು ತುಂಬಾ ಕಡಿಮೆ ಬೆಲೆಗೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ವಜನ ಪಕ್ಷಪಾತ ನಡೆಸಿರುವ ಹೂಡಾ ಅವರು ತಮ್ಮ ಕುಟುಂಬದ ಸದಸ್ಯರು, ಸಂಬಂಧಿಗಳು, ರಾಜಕಾರಣಿಗಳು, ಅಧಿಕಾರಶಾಹಿಗಳು ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಈ ಭೂಮಿಗಳನ್ನು ಮಂಜೂರು ಮಾಡಿದ್ದರು ಎಂಬ ದೂರುಗಳು ದಾಖಲಾಗಿದ್ದವು.

► Follow us on –  Facebook / Twitter  / Google+

Facebook Comments

Sri Raghav

Admin