ಹರ್ಯಾಣದ ಗುರುಗ್ರಾಮ್‍ನಲ್ಲಿ ಮಣಪ್ಪುರಂ ಫೈನಾನ್ಸ್ ದರೋಡೆ : 10 ಕೋಟಿ ಮೌಲ್ಯದ 33kg ಚಿನ್ನ ಲೂಟಿ..!

ಈ ಸುದ್ದಿಯನ್ನು ಶೇರ್ ಮಾಡಿ

Manappuram-Finance-robbed

ಗುರುಗ್ರಾಮ್ (ಗುರ್ಗಾಂವ್), ಫೆ.10– ಶಸ್ತ್ರಸಜ್ಜಿತ ಡಕಾಯಿತರ ತಂಡವೊಂದು ಮಣಪ್ಪುರಂ ಫೈನಾನ್ಸ್ ಕಂಪನಿ ಮೇಲೆ ದಾಳಿ ನಡೆಸಿ ಮೂವರನ್ನು ತೀವ್ರ ಗಾಯಗೊಳಿಸಿ 10 ಕೋಟಿ ರೂ. ಮೌಲ್ಯದ 33 ಕೆಜಿ ಚಿನ್ನ ಲೂಟಿ ಹಾಗೂ 8 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಹರ್ಯಾಣದ ಗುರುಗ್ರಾಮ್‍ನಲ್ಲಿ ನಿನ್ನೆ ಹಾಡಹಗಲೇ ನಡೆದಿದೆ.  ವಿವಿಧ ನಗರಗಳಲ್ಲಿನ ಮಣಪ್ಪುರಂ ಫೈನಾನ್ಸ್ ಮೇಲೆ ಕಳೆದ ಆರು ತಿಂಗಳಿನಿಂದಲೂ ದರೋಡೆ ಮುಂದುವರಿದಿದ್ದು, ಇದು ಆರನೇ ಕೃತ್ಯವಾಗಿದೆ.   ಚಿನ್ನಾಭರಣ ಠೇವಣಿ ಮೇಲೆ ಸಾಲ ನೀಡುವ ಗುರುಗ್ರಾಮ್‍ನ ಜನಸಂದಣಿಯ ನ್ಯೂ ರೈಲ್ವೆ ರೋಡ್‍ನ ಕಚೇರಿಯಲ್ಲಿ ಈ ಕೃತ್ಯ ನಡೆದಿದೆ. ದರೋಡೆಕೋರರಿಂದ ಹಲ್ಲೆಗೆ ಒಳಗಾಗಿರುವ ಕಂಪನಿಯ ಭದ್ರತಾ ಗಾರ್ಡ್ ಮತ್ತು ಇನ್ನಿಬ್ಬರು ಗ್ರಾಹಕರನ್ನು ಗುರುಗ್ರಾಮ್‍ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:

ನಿನ್ನೆ ಬೆಳಗ್ಗೆ 11ರ ಸುಮಾರಿನಲ್ಲಿ ಐವರು ಗ್ರಾಹಕರ ಸೋಗಿನಲ್ಲಿ ಒಂದನೆ ಮಹಡಿಯಲ್ಲಿರುವ ಮಣಪ್ಪುರಂ ಫೈನಾನ್ಸ್ ಕಚೇರಿಯೊಳಗೆ ಪ್ರವೇಶಿಸಿದರು. ಅವರ ಹಿಂದೆಯೇ ಇನ್ನು ಮೂವರು ಒಳನುಗ್ಗಿ ಕ್ಷಣಾರ್ಧದಲ್ಲೇ ಸೆಕ್ಯೂರಿಟಿ ಗಾರ್ಡ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ರೈಫಲ್ ಕಸಿದುಕೊಂಡರು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಕಂಪನಿಯ ಸಿಬ್ಬಂದಿ ಮತ್ತು ಗ್ರಾಹಕರಿಗೆ ಮಾರಕಾಸ್ತ್ರಗಳಿಂದ ಬೆದರಿಸಿದರು. ಈ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಇಬ್ಬರು ಗ್ರಾಹಕರ ಮೇಲೆ ಹಲ್ಲೆ ನಡೆಸಿದರು.   ನಂತರ ಬ್ಯಾಂಕ್‍ನ ಲಾಕರ್‍ನಲ್ಲಿದ್ದ 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 8 ಲಕ್ಷ ರೂ. ನಗದು ಲೂಟಿ ಮಾಡಿ ಪರಾರಿಯಾದರು.

ಪೊಲೀಸ್ ಆಯುಕ್ತ ಸಂದೀಪ್ ಖಿರ್ವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಪರಿಶೀಲಿಸಲಾಗುತ್ತಿದೆ. ಏಳದಿಂದ ಎಂಟು ಮಂದಿಯಿದ್ದ ಡಕಾಯಿತರಿಂದ ಈ ಕೃತ್ಯ ನಡೆದಿದ್ದು, ದುಷ್ಕರ್ಮಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.   ಸಿವಿಲ್ ಲೈನ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin