ಹರ್ಯಾಣದ ರೋಟಕ್ ನಿಂದ ರಿಯೋ ವರೆಗೆ ಸಾಕ್ಷಿ ಮಲಿಕ್ ಸಾಗಿದ ಹಾದಿ

ಈ ಸುದ್ದಿಯನ್ನು ಶೇರ್ ಮಾಡಿ

Sakshi-malikaa

ರೋಟಕ್, ಆ.18- ರಿಯೋ ಒಲಂಪಿಕ್ನಲ್ಲಿ ಕಂಚು ಪದಕ ಕೊರಳಿಗೇರಿಸಿ ಭಾರತದ ಗೌರವವನ್ನು ಕಾಪಾಡಿದ ಕುಸ್ತಿ ಪಟು ಸಾಕ್ಷಿ ಮಲಿಕ್ ಅವರ ರೋಟಕ್ನಿಂದ ರಿಯೋತನಕ ನಡೆದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಅದು ಕಲ್ಲು-ಮುಳ್ಳುಗಳಿಂದ ತುಂಬಿದ್ದ ದುರ್ಗಮ ಮಾರ್ಗವಾಗಿತ್ತು. ಭಾರತದ ಹೆಮ್ಮೆಯ ಪುತ್ರಿಯು ಸಾಗಿ ಬಂದ ಹಾದಿ ಹೀಗಿದೆ:
* ಹರ್ಯಾಣದ ರೋಟಕ್ ಜಿಲ್ಲೆಯ ಮೋಖ್ರಾ ಎಂಬ ಪುಟ್ಟ ಗ್ರಾಮದ ಬಡ ದಂಪತಿಗೆ ಸೆಪ್ಟೆಂಬರ್ 3, 1992ರಲ್ಲಿ ಜನಿಸಿದರು. [ ಕಂಚು ಗೆದ್ದು ಕೋಟ್ಯಾಧೀಶಳಾದ ಕುಸ್ತಿಪಟು ಸಾಕ್ಷಿ ಮಲ್ಲಿಕ್  ]
* 12ನೆ ವಯಸ್ಸಿನಲ್ಲಿ ಕುಸ್ತಿ ಕ್ರೀಡೆಯತ್ತ ವಿಶೇಷ ಒಲವು. ತರಬೇತುದಾರ ಈಶ್ವರ್ ದಹಿಯಾ ಅವರಿಂದ 2002ರಲ್ಲಿ ಕುಸ್ತಿ ಅಖಾಡಕ್ಕೆ ಜಿಗಿತ.
* ಕುಸ್ತಿ ಪಟು ಆಗಬೇಕೆಂಬ ತಮ್ಮ ಬಹುದಿನಗಳ ಕನಸನ್ನು ಸಾಕಾರಗೊಳಿಸಲು ಅಹರ್ನಿಶಿ ಪರಿಶ್ರಮ. ಬಾಲ್ಯದಲ್ಲೇ ಗಂಡು ಮಕ್ಕಳೊಂದಿಗೆ ಕುಸ್ತಿಯಲ್ಲಿ ಸೆಣಸಿ ಸೈ ಅನಿಸಿಕೊಂಡರು. ಹರ್ಯಾಣದಲ್ಲಿ ಮಹಿಳೆಯರ ಮೇಲೆ ವಿಧಿಸಲಾದ ನಿರ್ಬಂಧಗಳ ಕೊಂಡಿ ಕಳಚಿ ಕುಸ್ತಿಪಟುವಾದುದು ಒಂದು ಸಾಧನೆ.
* ಈಕೆ ಒಲಂಪಿಕ್ ಪದಕ ಗೆದ್ದ ಭಾರತದ ನಾಲ್ಕನೆ ಮಹಿಳಾ ಕ್ರೀಡಾಪಟು. ವೇಟ್ ಲಿಫ್ಟರ್ ಕರ್ಣಂ ಮಲ್ಲೇಶ್ವರಿ (2002, ಸಿಡ್ನಿ), ಬಾಕ್ಸರ್ ಮೇರಿ ಕೊಮ್ (2012, ಲಂಡನ್) ಮತ್ತು ಶಟ್ಲರ್ ಸೈನಾ ನೆಹ್ವಾಲ್ (2012, ಲಂಡನ್). [  ಭಾರತದ ಮಾನ ಉಳಿಸಿದ ಸಾಕ್ಷಿ : ಕುಸ್ತಿಯಲ್ಲಿ ಕಂಚು ತಂದ ಗಟ್ಟಿಗಿತ್ತಿ   ]
* 2010ರಲ್ಲಿ 58ಕೆಜಿ ವಿಭಾಗದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದರು.
* 2012ರಲ್ಲಿ ಕೂನಿಯರ್ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಮತ್ತು ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ನಲ್ಲಿ ರಜತ ಪದಕ ಕೊರಳಿಗೇರಿಸಿದರು.
* 2016ರ ಜುಲೈನಲ್ಲಿ ನಡೆದ ಸ್ಪಾನಿಷ್ ಗ್ರ್ಯಾನ್ ಪ್ರಿ ಕ್ರೀಡಾಕೂಟದ 60 ಕೆಜಿ ವಿಭಾಗದಲ್ಲಿ ಕಂಚು ಪದಕ ಜಯಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin